[kolar-karnataka] - ಸಾಮ್ರಾಟ್ ಸುಯೋಧನದಲ್ಲಿ ಶಾಸಕ ನಾರಾಯಣಸ್ವಾಮಿ ಕೃಷ್ಣ

  |   Kolar-Karnatakanews

ಬಂಗಾರಪೇಟೆ: ತಾಲೂಕಿನ ಬೂದಿಕೋಟೆಯಲ್ಲಿ ಶನಿವಾರ ರಾತ್ರಿ ನಡೆದ ‘ಸಾಮ್ರಾಟ್ ಸುಯೋ ಧನ’ ಎಂಬ ಪೌರಾಣಿಕ ನಾಟಕದಲ್ಲಿ 2ನೇ ಕೃಷ್ಣ ವೇಷಧಾರಿಯಾಗಿ ಶಾಸಕ ಎಸ್‌.ಎನ್‌.ನಾರಾಯ ಣಸ್ವಾಮಿ ಬಣ್ಣ ಹಾಕಿ ನಟನೆ ಮಾಡಿದರು.

ಬೂದಿಕೋಟೆ ಗ್ರಾಮದ ಪ್ರಸನ್ನ ಶ್ರೀಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಪುಷ್ಪ ಪಲ್ಲಕ್ಕಿ ಮತ್ತು ಕರಗ ಮಹೋತ್ಸವ ಅಂಗವಾಗಿ ಪೌರಾಣಿಕ ನಾಟಕಗಳ ಗುರುಗಳಾದ ಮುನಿವೆಂಕ ಟಪ್ಪ ಹಾಗೂ ನಾಗದೇವನಹಳ್ಳಿ ಸಿದ್ದಪ್ಪ ನಿರ್ದೇಶನದಲ್ಲಿ ಹಾಗೂ ಟೇಕಲ್ ರಾಧಾಕೃಷ್ಣ ಅವರ ಶ್ರೀಮಾರುತಿ ಡ್ರಾಮಾ ಸೀನ್ಸ್‌ ನೇತೃತ್ವದಲ್ಲಿ ಸಾಮ್ರಾಟ್ ಸುಯೋಧನ ಎಂಬ ತೆಲುಗು ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

ಗಂಟೆಗೂ ಹೆಚ್ಚು ಕಾಲ ಮೇಕಪ್‌: ಮಹಾಭಾರತದಲ್ಲಿ ಪಾಂಡವರಿಗೆ ಮತ್ತು ಕೌರವರಿಗೆ ಯುದ್ಧ ಘೋಷಣೆಯಾದ ಮೇಲೆ ಶ್ರೀಕೃಷ್ಣನ ಸಹಕಾರಕ್ಕಾಗಿ ದುರ್ಯೋಧನ ಮತ್ತು ಅರ್ಜುನ ಬಂದಾಗ ಶ್ರೀಕೃಷ್ಣ ಮಲಗಿರುವ ಸನ್ನಿವೇಶದಲ್ಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ನಟನೆ ಪ್ರಾರಂಭಿಸಿದರು. ಅರ್ಜುನ ಮತ್ತು ದುರ್ಯೋಧನರ ಜೊತೆ ಸಂವಾದ ಮಾಡಿದ ಬಗ್ಗೆ ನಾಗರಿಕರಿಂದ ಚಪ್ಪಾಳೆ ಗಿಟ್ಟಿಸಿದರು. ಶಾಸಕರ ಜೊತೆಯಲ್ಲಿ ಬರುವ ದುರ್ಯೋಧನ ಪಾತ್ರಧಾರಿಯಾಗಿ ಬೂದಿಕೋಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುಲ್ಲಹಳ್ಳಿ ನಾಗರಾಜ್‌, ಅರ್ಜುನನಾಗಿ ಬಲಮಂದೆ ತಾಪಂ ಸದಸ್ಯ ಮಹದೇವ್‌ ನಟನೆಗೆ ಜನತೆ ಪ್ರಶಂಸಿದರು. ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ಅವರಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮೇಕಪ್‌ ಮಾಡಿದರು....

ಫೋಟೋ - http://v.duta.us/QCc_kAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/a8L2zwAA

📲 Get Kolar Karnataka News on Whatsapp 💬