[mandya] - ನಮಗೆ ಸಮೀಕ್ಷೆಗಿಂತ ಫ‌ಲಿತಾಂಶ ಮುಖ್ಯ: ಸುಮಾ

  |   Mandyanews

ಮಂಡ್ಯ: ಚುನಾವಣೋತ್ತರ ಸಮೀಕ್ಷೆಗಳನ್ನು ನಾನು ಗಂಭೀರವಾಗಿ ಪರಿಗಣಿಸಿಲ್ಲ. ಒಂದೊಂದು ಸಮೀಕ್ಷೆ ಒಬ್ಬೊಬ್ಬರ ಪರವಾಗಿವೆ. ಅದ ಕ್ಕಾಗಿ ಮೇ 23ರ ಫ‌ಲಿತಾಂಶವೇ ನನಗೆ ಮುಖ್ಯವಾಗಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಹೇಳಿ ದರು. ನಗರದ ಕನಕ ಭವನದಲ್ಲಿ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಹಾಗಾಗಿ ಅವುಗಳ ಬಗ್ಗೆ ಯೋಚನೆಯನ್ನೂ ಮಾv‌ುವುದಿಲ್ಲ. ತಲೆಕೆಡಿಸಿಕೊಳ್ಳುವುದೂ ಇಲ್ಲ. ಏನೇ ಇದ್ದರೂ ಮೇ 23ರವರೆಗೆ ಕಾದುನೋಡುವೆ. ನನಗೆ ಗೆಲ್ಲುವ ವಿಶ್ವಾಸವಿದೆ. ನಾನು ಯಾವುದೇ ಸರ್ವೆ ಮಾಡಿಸಿಲ್ಲ ಎಂದು ಹೇಳಿದರು.

ವಿಶೇಷ ಅರ್ಥ ಕಲ್ಪಿಸಬೇಕಿಲ್ಲ: ನನ್ನ ಹಾಗೂ ಮಾಜಿ ಸಚಿವರಾದ ಚಲುವರಾಯಸ್ವಾಮಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಇಬ್ಬರೂ ಲೋಕಾಭಿರಾಮವಾಗಿ ಕೆಲಕಾಲ ಚರ್ಚೆ ನಡೆಸಿದೆವು. ರಾಜಕೀಯವಾಗಿ ಏನನ್ನೂ ಮಾತನಾಡಿಲ್ಲ. ಚುನಾವಣೆ ಮುಗಿದಿರುವುದರಿಂದ ಸ್ವಲ್ಪ ರೆಸ್ಟ್‌ ಮಾಡಿ ಎಂದು ಸಲಹೆ ನೀಡಿದ್ದಾರೆಂದು ತಿಳಿಸಿದರು. ರೈತರ ಸಾಲ ಮನ್ನಾ ಮಾಡುವುದು ಬೇಡ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಿ ಎಂದಿರುವ ನಟ ದರ್ಶನ್‌ ಮಾತಿಗೆ ಬೆಂಬಲ ಸೂಚಿಸಿದ ಸುಮಲತಾ, ದರ್ಶನ್‌ ಬಹಳ ಒಳ್ಳೆಯ ಹೇಳಿಕೆ ನೀಡಿದ್ದಾರೆ. ನನ್ನ ಮನಸ್ಸಿನಲ್ಲಿರುವುದೂ ಅದೇ ವಿಚಾರ. ಅವರ ಹೇಳಿಕೆಯನ್ನು ಪ್ರಶಂಸಿಸಬೇಕು. ಯಾವುದೇ ಸರ್ಕಾರವಿರಲಿ ಅದನ್ನು ಫಾಲೋ ಮಾಡುವುದು ಒಳ್ಳೆಯದು ಎಂದರು. ಇದು ನನಗೆ ವಿಶ್ರಾಂತಿ ಸಮಯ. ರಾಜಕೀಯ ಬಿಟ್ಟು ಬೇರೆ ವಿಚಾರ ಮಾತನಾಡೋಣ. ನಾನು ಎಲ್ಲರಿಗೂ ಇದೇ ಮಾತನ್ನು ಹೇಳಿದ್ದೇನೆ ಎಂದು ನುಡಿದರು....

ಫೋಟೋ - http://v.duta.us/I9ubzgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/_Dw8_QAA

📲 Get Mandya News on Whatsapp 💬