[mandya] - ಸಮೀಕ್ಷಾ ವರದಿ: ಕಂಗೆಟ್ಟ ಸಿಎಂ ಕುಮಾರಸ್ವಾಮಿ

  |   Mandyanews

ಮಂಡ್ಯ: ರಾಜ್ಯದಲ್ಲೇ ಹೈವೋಲ್ಟೇಜ್ ಕ್ಷೇತ್ರವಾಗಿ ಬಿಂಭಿತವಾಗಿದ್ದು, ಜೆಡಿಎಸ್‌ ಮತ್ತು ಪಕ್ಷೇತರ ಅಭ್ಯರ್ಥಿಯ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆಯ ನಂತರವೂ ಸುದ್ದಿಯಲ್ಲಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖೀಲ್ ವಿರುದ್ಧ ಸುಮಲತಾ ಅಂಬರೀಶ್‌ ಸ್ಪರ್ಧೆಯಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿದ್ದ ಮಂಡ್ಯ, ಈಗ ಸೋಲು-ಗೆಲುವಿನ ಲೆಕ್ಕಾಚಾರದಿಂದಾಗಿ ಮತ್ತೂಮ್ಮೆ ಮುನ್ನಲೆಗೆ ಬಂದಿದೆ.

ಚುನಾವಣಾ ನಂತರದ ಪ್ರಾಥಮಿಕ ವರದಿಯಲ್ಲಿ ನಿಖೀಲ್ಕುಮಾರಸ್ವಾಮಿ 40 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆಂಬ ಗುಪ್ತದಳದ ವರದಿಯನ್ನಾಧರಿಸಿ ಜೆಡಿಎಸ್‌ ವಲಯದಲ್ಲಿ ಸಂಭ್ರಮದ ವಾತಾವರಣ ಇತ್ತು. ಆದರೆ, ನಂತರದ ಜನಾಭಿಪ್ರಾಯ ಮತ್ತು ಜೆಡಿಎಸ್‌ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ನಿಖೀಲ್ ಕುಮಾರಸ್ವಾಮಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿ ಬಂದಿದ್ದು, ಇದು ಜಿಲ್ಲೆಯ ರಾಜಕಾರಣದ ಮೇಲೆ ಗಂಭೀರ ಪ್ರಭಾವ ಬೀರಿದೆ.

ಮುಖ್ಯಮಂತ್ರಿಗಳಿಗೆ ಆಘಾತ: ಪ್ರಸ್ತುತ ಸಮೀಕ್ಷೆಯ ಪ್ರಕಾರ, ಮಂಡ್ಯ, ಮಳವಳ್ಳಿ ಮತ್ತು ಮದ್ದೂರು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಅವರಿಗಿಂತಲೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಮುನ್ನಡೆಯನ್ನು ಸಾಧಿಸಲಿದ್ದಾರೆ ಎಂಬುದು ಸಮೀಕ್ಷೆಯಿಂದ ಹೊರ ಬಂದಿದ್ದು, ಇದು ಜೆಡಿಎಸ್‌ಗೆ ನುಂಗಲಾದರ ತುತ್ತಾದರೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಆಘಾತವನ್ನುಂಟುಮಾಡಿದೆ ಎನ್ನಲಾಗಿದೆ....

ಫೋಟೋ - http://v.duta.us/Ix5izAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/n4MXRgAA

📲 Get Mandya News on Whatsapp 💬