[mysore] - ಕುಂಬಾರಿಕೆ ಕೌಶಲ್ಯ, ಮಣ್ಣಿನಲ್ಲಿ ಅರಳಿದ ಕಲಾಕೃತಿಗಳು

  |   Mysorenews

ತಿ.ನರಸೀಪುರ: ವೃತ್ತಿ ಯಾವುದೇ ಆದರೂ ಬದುಕು ರೂಪಿಸಿಕೊಳ್ಳುವ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಇಲ್ಲೋರ್ವ ಕುಂಬಾರಿಕೆ ವೃತ್ತಿ ಕೈಗೊಂಡು ಆಕರ್ಷಕ ಮಣ್ಣಿನ ಕಲಾಕೃತಿಗಳನ್ನು ತಯಾರಿಸಿ ರಾಜ್ಯ, ಹೊರ ರಾಜ್ಯಗಳಲ್ಲಿ ತನ್ನದೇ ಕೌಶಲ್ಯ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

ತಾಲೂಕಿನ ಬನ್ನೂರು ಹೋಬಳಿ ದೊಡ್ಡಮುಲಗೂಡು ಗ್ರಾಮದ ಡಿ.ಗೋವಿಂದ ಅವರು ತಮ್ಮ ಅದ್ಭುತ ಕರ ಕುಶಲ ಕಲೆಯನ್ನು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೆಹಲಿ, ಗೋವಾ, ಚೆನ್ನೈ ಸೇರಿದಂತೆ ವಿವಿಧೆಡೆ ತಮ್ಮ ಕಲೆಯ ಪ್ರಾತ್ಯಕ್ಷಿಕೆ, ಪ್ರದರ್ಶನ ನೀಡಿದ್ದಾರೆ.

ಬದುಕು ನಿರ್ವಹಣೆ: ತಮ್ಮ ಮನೆಯ ಹಿಂಭಾಗದ ಒಂದು ಸಣ್ಣ ಕೊಠಡಿಯಲ್ಲಿ ತಿರುಗುವ ಚಕ್ರದಲ್ಲಿ ಸಿಗುವ ಮಣ್ಣಿನಿಂದ ವಿವಿಧ ಕಲಾಕೃತಿಗಳನ್ನು ತಯಾರಿಸಿ, ಅವುಗಳಿಗೆ ಬಣ್ಣ ಹಚ್ಚಿ ಸೌಂದರ್ಯದ ಕಳೆ ನೀಡಿ ಬಳಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನದ ಮೂಲಕ ಮಾರಾಟ ಮಾಡಿ ಬದುಕಿನ ನಿರ್ವಹಣೆ ಮಾಡುತ್ತಿದ್ದಾರೆ. ಇವರ ಬೆನ್ನೆಲುಬಾಗಿ ಇವರ ಪತ್ನಿ ಎಸ್‌.ಬಿ.ಶ್ರುತಿ ಸಹಕರಿಸುತ್ತಿದ್ದಾರೆ.

ಆಕರ್ಷಕ ಕಲಾಕೃತಿಗಳು: ಉತ್ತಮ ಕೌಶಲ್ಯದೊಂದಿಗೆ ಕುಂಬಾರಿಕೆಯನ್ನು ವೃತ್ತಿ ಮಾಡಿಕೊಂಡಿರುವ ಗೋವಿಂದ್‌ ದಂಪತಿ ಮಣ್ಣಿನ ಜಗ್‌, ಗಣಪತಿ, ಹೂವಿನ ಕುಂಡ, ಆಮೆಯ ಬಟ್ಟಲು, ಮಾಯ ದೀಪ(ಮ್ಯಾಜಿಕ್‌ ಲ್ಯಾಂಪ್‌) ಬುದ್ಧನ ವಿಗ್ರಹ, ತೊಟ್ಟಿಲು, ಬುಟ್ಟಿ ಗೋಡೆಗಳಿಗೆ ಬಳಸಬಹುದಾದ ವಿವಿಧ ಕಲಾಕೃತಿಗಳನ್ನು ತಯಾರಿಸುತ್ತಾರೆ....

ಫೋಟೋ - http://v.duta.us/bifcygAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/rtoFQQAA

📲 Get Mysore News on Whatsapp 💬