[raichur] - ಕೋಟೆ ಪಕ್ಕದಲ್ಲೇ ಕೊಳವೆಬಾವಿ ಕೊರೆತ!

  |   Raichurnews

ರಾಯಚೂರು: ನಗರದ ಉಸ್ಮಾನಿಯಾ ಮಾರುಕಟ್ಟೆ ಹಿಂಭಾಗದ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡುವ ಕೋಟೆ ಪಕ್ಕದಲ್ಲಿ ಖಾಸಗಿಯವರು ಕೊಳವೆಬಾವಿ ಕೊರೆಸಿದ್ದು, ಕಂಡರೂ ಕಾಣದಂತಿರುವ ನಗರಾಡಳಿತ, ಪ್ರಾಚ್ಯವಸ್ತು ಇಲಾಖೆ ನಡೆಗೆ ಸಾರ್ವಜನಿಕರ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ನಗರದಲ್ಲಿ ಈಗಾಗಲೇ ಕೋಟೆಗಳ ಒತ್ತುವರಿ ಮಿತಿಮೀರಿದೆ ಎಂಬ ಆರೋಪಗಳಿವೆ. ಅಲ್ಲದೇ, ಈಗಿರುವ ಒಂದಷ್ಟು ಪ್ರಾಚ್ಯವಸ್ತುಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂಬ ಕಿಂಚಿತ್ತೂ ಕಾಳಜಿಯೂ ಕಾಣದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಂಥದ್ದರಲ್ಲಿ ಶನಿವಾರ ತಡರಾತ್ರಿ ಕೋಟೆ ಪಕ್ಕದಲ್ಲೇ ಬೋರ್‌ ಕೊರೆಯಿಸಲಾಗಿದೆ. ಅದಕ್ಕೆ ಅಡ್ಡ ಬಂದ ಕಲ್ಲುಗಳನ್ನು ತೆರವು ಮಾಡಿ ಬೋರ್‌ ಕೊರೆಸಲಾಗಿದೆ. ಈ ರೀತಿ ಮಾಡುವುದು ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆಗಳ ನಿಯಮಗಳಿಗೆ ವಿರುದ್ಧವಾಗಿದ್ದು, ನಗರದಲ್ಲಿ ಮಾತ್ರ ಯಾರೂ ಹೇಳುವವರು ಕೇಳುವವರಿಲ್ಲದಾಗಿದೆ.

ಈಗಾಗಲೇ ನಗರದ ಉಸ್ಮಾನೀಯ ಮಾರುಕಟ್ಟೆ ಹಿಂಭಾಗ ಸೇರಿ ವಿವಿಧೆಡೆ ಕೋಟೆಗಳ ಒತ್ತುವರಿ ಮಾಡಲಾಗಿದೆ ಎಂಬ ಆರೋಪಗಳಿವೆ. ಆದರೆ, ಜಿಲ್ಲಾಡಳಿತವಾಗಲಿ, ಪ್ರಾಚ್ಯವಸ್ತು ಇಲಾಖೆ ಆಗಲಿ ಆ ಸ್ಥಳಗಳ ತೆರವಿಗೆ ಮುಂದಾಗುತ್ತಿಲ್ಲ. ಆದರೆ, ಈಗ ಕೋಟೆ ಒತ್ತುವರಿ ಮಾಡಿದ್ದಲ್ಲದೇ, ಕೇವಲ ಮೂರು ಅಡಿ ಪಕ್ಕದಲ್ಲಿ ನೂರಾರು ಅಡಿ ಕೊಳವೆ ಬಾವಿ ಕೊರೆಸುತ್ತಿರುವುದು ಐತಿಹಾಸಿಕ ಸ್ಥಳಗಳ ರಕ್ಷಣೆಗೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ....

ಫೋಟೋ - http://v.duta.us/gx1wnQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Q_bewwAA

📲 Get Raichur News on Whatsapp 💬