[ramnagara] - ನಮ್ಮದು ಎನ್ನುವುದು ಬೆಳವಣಿಗೆ ಧ್ಯೋತಕ

  |   Ramnagaranews

ಮಾಗಡಿ: ನಾನು ಎನ್ನುವುದು ನಾಶದ ಸಂಕೇತವಾಗಿದೆ. ನಮ್ಮದು ಎನ್ನುವುದು ಬೆಳವಣಿಗೆಯ ಧೋತಕವಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಸೋಲೂರು ಹೋಬಳಿ ಮೋಟಗಾನಹಳ್ಳಿಯಲ್ಲಿ ಗ್ರಾಮ ದೇವತೆ ಗಂಗಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಅವರು ಮಾತನಾಡಿ, ಮನುಷ್ಯನಾದವನು ಅನ್ಯಮಾರ್ಗದಿಂದ ದೂರ ಉಳಿಯಬೇಕು. ಸದ್ಬಾವನೆಯನ್ನು ಬೆಳೆಸಿಕೊಳ್ಳಬೇಕು. ದೇವಭಾವನೆಯಿಂದ ಮನುಷ್ಯ ಪವಿತ್ರನಾಗುತ್ತಾನೆ. ಭಾರತೀಯ ಪರಂಪರೆಯಲ್ಲಿ ತಾಯಿಗೆ ದೇವರ ಸ್ಥಾನ ನೀಡಿದೆ. ತಾಯಿಗಿಂತ ದೇವರಿಲ್ಲ, ಸಾಧನೆಯಿಂದ ಸಂಪತ್ತನ್ನು ಗಳಿಸಿದವರು, ವಿನಯವಂತಿಕೆಯಿಂದ ಮತ್ತು ದಾನ, ಧರ್ಮದ ಸೇವೆಯಿಂದ ತಾಯಿಯನ್ನು ಸಂತೃಪ್ತಿಗೊಳಿಸುವ ಮೂಲಕ ಜನ್ಮ ಸಾರ್ಥಕಗೊಳಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ನೆಮ್ಮದಿ ಖರೀದಿಸುವ ವಸ್ತುವಲ್ಲ: ಸಮಾರಂಭ ಉದ್ಘಾಟಿಸಿದ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ನೆಮ್ಮದಿ ಎನ್ನುವುದು ಅಂಗಡಿಯಲ್ಲಿ ಹಣ ನೀಡಿ ಖರೀದಿಸುವ ವಸ್ತುವಲ್ಲ. ಮನುಷ್ಯನಿಗೆ ನೆಮ್ಮದಿ ಸಿಗುವುದು ಭಗವಂತನ ಸಾನ್ನಿಧ್ಯದಲ್ಲಿ. ಭಗವಂತ ಸ್ಮರಣೆಯಿಂದ ಮಾತ್ರ ನೆಮ್ಮದಿ ಸಾಧ್ಯ. ಕಲಿಯುಗದಲ್ಲಿ ಧಾರ್ಮಿಕ ಕೈಂಕರ್ಯಗಳಿಂದ ಶೀಘ್ರದಲ್ಲಿಯೇ ಪುಣ್ಯ ಪ್ರಾಪ್ತಿ ಲಭಿಸುತ್ತದೆ. ಭಗವಂತ ಕೇವಲ ಬ್ರಾಹ್ಮಣ, ಲಿಂಗಾಯತರ ಸ್ವತ್ತಲ್ಲ, ಎಲ್ಲರ ಸ್ವತ್ತಾಗಿದೆ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು, ಪೋಷಕರು ತಮ್ಮ ಮಕ್ಕಳನ್ನು ಹತೋಟಿಯಲ್ಲಿಟ್ಟುಕೊಂಡು ಉತ್ತಮವಾಗಿ ಬೆಳೆಸಿದರೆ ಸತøಜೆಗಳಾಗಿ ಸಮಾಜವನ್ನು ಬೆಳಗುತ್ತಾರೆ. ಯಾವುದೇ ಕಾರಣಕ್ಕೂ ಮಕ್ಕಳಲ್ಲಿ ದ್ವೇಷ, ಅಸೂಯೆ ಭಾವನೆ ಬಿತ್ತಬಾರದು. ಸಹೋದರತ್ವ ಬೆಳಸಬೇಕಿದೆ. ಯಾರೂ ದುರಾಭ್ಯಾಸ ಮತ್ತು ದುಷ್ಚಟಗಳಿಂದ ಉದ್ಧಾರವಾದ ಉದಾಹರಣೆಗಳಿಲ್ಲ. ಭಗವಂತನ ಸ್ಮರಣೆ, ಸಂಸ್ಕೃತಿ, ಸದ್ಬಾವನೆಯಿಂದ ಸಂಸ್ಕಾರವಂತರಾಗಿ ದೇಶವನ್ನು ಬೆಳಗಿಸಿದ್ದಾರೆ ಎಂದು ಹೇಳಿದರು....

ಫೋಟೋ - http://v.duta.us/3GBDOgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/eE85kAAA

📲 Get Ramnagara News on Whatsapp 💬