[ramnagara] - ಬಮೂಲ್ಗೆ ಆಯ್ಕೆಯಾಗ್ತಾರ ನಾಗರಾಜ್‌?

  |   Ramnagaranews

ರಾಮನಗರ: ಮೇ 12ರಂದು ನಡೆಯುವ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ಹಾಲು ಉತ್ಪಾದಕರ ಒಕ್ಕೂಟ (ಬಮೂಲ್) ರಾಮನಗರ ಕ್ಷೇತ್ರದ ನಿರ್ದೆಶಕರಾಗಿ ಸತತ 4 ಬಾರಿ ಆಯ್ಕೆಯಾಗಿರುವ ಸ್ಥಾನಕ್ಕೆ ಪುನರಾಯ್ಕೆ ಬಯಸಿರುವ ಪಿ.ನಾಗರಾಜ್‌ 5ನೇ ಬಾರಿಗೆ ಪುನರಾಯ್ಕೆ ಆಗ್ತಾರ? ಜಿಲ್ಲೆಯಲ್ಲಿ ಅವರ ಕ್ಷೀರ ಕ್ರಾಂತಿ ಮುಂದುವರಿಯುವುದೆ ಎಂಬ ಪ್ರಶ್ನೆಗಳು ಸಾಮಾನ್ಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪಿ.ನಾಗರಾಜ್‌ ವಿರುದ್ಧ ಸ್ಪರ್ಧೆಗೆ ಕೆಲವಷ್ಟು ಹೆಸರುಗಳು ಕೇಳಿ ಬಂದಿದೆ. ಆದರೆ, ಸಿಎಂ ಎಚ್. ಡಿ.ಕುಮಾರಸ್ವಾಮಿ ಅವರ ಮಾತೇ ಫೈನಲ್! ಪಿ.ನಾಗರಾಜ್‌ ಈಗಾಗಲೇ ಸಿಎಂ ಆಶೀರ್ವಾದ ಪಡೆದಿದ್ದಾರೆ. ಈ ಬಾರಿಯೂ ಅವಿರೋಧವಾಗಿ ಆಯ್ಕೆಯಾಗ್ತಾರ? ಚುನಾವಣೆ ಎದುರಿಸಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.

2 ಬಾರಿ ಅವಿರೋಧವಾಗಿ ಆಯ್ಕೆ: ರಾಜಕೀಯ ರಂಗದಲ್ಲಿ ಸಕ್ರಿಯವಾಗಿದ್ದ ಪಿ.ನಾಗರಾಜ್‌ (ಮಾಯಗಾನಹಳ್ಳಿ ನಾಗರಾಜ್‌) 1999ರಲ್ಲಿ ಸಹಕಾರ ಕ್ಷೇತ್ರದ ರಾಜಕೀಯಕ್ಕೆ ಕಾಲಿಟ್ಟರು. 1999ರಲ್ಲಿ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿ ಕೂಟಗಲ್ ದೇವೇಗೌಡರ ವಿರುದ್ಧ ಜಯ ಸಾಧಿಸಿದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. 2009ರಲ್ಲಿ ಮೂರನೇ ಬಾರಿಗೆ ಬಿಡದಿಯ ಬ್ಯಾಟಪ್ಪ, ಶಿವಲಿಂಗಯ್ಯ ವಿರುದ್ಧ ಮತ್ತೆ ಜಯ ಸಾಧಿಸಿದರು. 2014ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೀಗ ಮತ್ತೆ ಚುನಾವಣೆ ಎದುರಾಗಿದೆ. ಎರಡು ಅವಧಿಗೆ ಬಮೂಲ್ ಅಧ್ಯಕ್ಷರಾಗಿದ್ದ ಪಿ.ನಾಗರಾಜ್‌ ಸದ್ಯ ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಕೆಎಂಎಫ್) ಅಧ್ಯಕ್ಷರಾಗಿ ಹಲವು ಸುಧಾರಣೆಗಳಿಗೆ ಕಾರಣರಾಗಿದ್ದಾರೆ....

ಫೋಟೋ - http://v.duta.us/-6ajcAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ezXfPAAA

📲 Get Ramnagara News on Whatsapp 💬