[tumkur] - ರಸ್ತೆ ಅಭಿವೃದ್ಧಿ ಕಾಮಗಾರಿ ನನೆಗುದಿಗೆ

  |   Tumkurnews

ಕುಣಿಗಲ್: ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯತೆಯಿಂದಾಗಿ ಪಟ್ಟಣದ ಹಳೇಯ ರಾಷ್ಟ್ರೀಯ ಹೆದ್ದಾರಿ 48ರ ಹುಚ್ಚಮಾಸ್ತಿಗೌಡ ಸರ್ಕಲ್ನಲ್ಲಿ ಕೋಟ್ಯಂತರ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿದ್ದು ವಾಹನ ಹಾಗೂ ನಾಗರೀಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಬರೋಬ್ಬರೀ 25 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ತಾಲೂಕಿನ ಅಂಚೇಪಾಳ್ಯ ಹಾಗೂ ಕುಣಿಗಲ್ ಪಟ್ಟಣದ ಮಾರ್ಗವಾಗಿ ಅಲಪ್ಪನಗುಡ್ಡೆ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿ ಕೊಳ್ಳಲಾಯಿತು. ಆದರೆ, ಜನಸಂಖ್ಯೆ ಹೆಚ್ಚಳ ಹಾಗೂ ವಾಹನಗಳ ದುಪ್ಪಟ ಸಂಚಾರದಿಂದಾಗಿ ಪಟ್ಟಣದ ಮಲ್ಲಾಘಟ್ಟದಿಂದ ವೀರಭದ್ರೇಶ್ವರ ಕಲ್ಯಾಣ ಮಂಟ ಪದ ವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿತ್ತು. ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷ ಕಳೆದರೂ ಪಟ್ಟಣದ ಮದ್ದೂರು, ಮಂಗಳೂರು, ಬೆಂಗಳೂರು ಹಾಗೂ ತುಮಕೂರು ಕಡೆ ಸಂಪರ್ಕ ಕಲ್ಪಿಸುವ ಗ್ರಾಮ ದೇವತೆ ಹಾಗೂ ಎನ್‌.ಹುಚ್ಚಮಾಸ್ತಿಗೌಡ ವೃತ್ತದ ರಸ್ತೆ ಕಾಮಗಾರಿ ಈವರೆಗೂ ಕೈಗೆತ್ತಿ ಕೊಂಡಿಲ್ಲ. ಇದರಿಂದ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಕಿರಿಕಿರಿ ಉಂಟಾಗಿದಲ್ಲದೇ ರಸ್ತೆ ಧೂಳಿನಿಂದ ಕೂಡಿ ನಾಗರೀಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ....

ಫೋಟೋ - http://v.duta.us/BHkqagAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/yuVB6AAA

📲 Get Tumkur News on Whatsapp 💬