[tumkur] - ಹೊರಗುತ್ತಿಗೆ ಸೇವೆ ಮುಂದುವರಿಸಿ

  |   Tumkurnews

ಪಾವಗಡ: ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಶುಶ್ರೂಶಕಿ ಹಾಗೂ ಕಿರಿಯ ಮಹಿಳಾ ಸಹಾಯಕಿಯರ ಸೇವೆ ಮುಂದುವರಿಸಬೇಕು ಎಂದು ಒತ್ತಾಯಿಸಿ ನೌಕರರು ತಹಶೀಲ್ದಾರ್‌, ತಾಲೂಕು ಆರೋಗ್ಯ ಅಧಿಕಾರಿಗೆ ಮನವಿ ಸಲ್ಲಿಸಿದರು.

ಒಂದು ವರ್ಷದಿಂದ ಹೊರಗುತ್ತಿಗೆ ಆಧಾರದಲ್ಲಿ ಸುಮಾರು 40 ಮಂದಿ ತಾಲೂಕಿನ ಸರ್ಕಾರಿ ಆಸ್ಪತ್ರೆ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಏಕಾಏಕಿ ಕೆಲಸಕ್ಕೆ ಬಾರದಂತೆ ತಾಲೂಕು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಇದೇ ಕೆಲಸ ನೆಚ್ಚಿಕೊಂಡಿರುವವರಿಗೆ ದಿಕ್ಕು ತೋಚದಂತಾಗಿದೆ ಎಂದು ನೌಕರರು ಸಮಸ್ಯೆ ಹೇಳಿಕೊಂಡರು.

ಪಿಎಫ್, ಇಜಿಐಎಸ್‌ ಮಾಹಿತಿ ನೀಡಿಲ್ಲ: ರಾಜ್ಯದ ಇತರಡೆ ಹೊರಗುತ್ತಿಗೆ ನೌಕರರ ಸೇವೆ ಮುಂದು ವರಿಸಲಾಗಿದೆ. ಆದರೆ, ತಾಲೂಕಿನಲ್ಲಿ ಕೆಲವರನ್ನು ಮಾತ್ರ ಸೇವೆಯಲ್ಲಿ ಮುಂದುವರಿ ಯುವಂತೆ ತಿಳಿಸಿದ್ದಾರೆ.

ಮುಂದಿನ ಆದೇಶ ಬಂದ ನಂತರ ಸೇವೆಗೆ ತೆಗೆದುಕೊಳ್ಳಲಾಗುವುದು. ಆದರೆ ಹಾಲಿ ಕರ್ತವ್ಯ ನಿರ್ವಹಿಸುವವರನ್ನೇ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಭರವಸೆ ನೀಡಲು ಅಗುವುದಿಲ್ಲ ಎಂದು ಅಧಿಕಾರಿ ಗಳು ಹೇಳುತ್ತಿದ್ದಾರೆ. ಈವರೆಗೆ ಸೇವೆ ಸಲ್ಲಿಸಿದವರ ಪಿಎಫ್, ಇಜಿಐಎಸ್‌ ಇತ್ಯಾದಿ ಮಾಹಿತಿಯನ್ನು ನೌಕರರಿಗೆ ನೀಡಿಲ್ಲ ಎಂದು ನೌಕರರು ಆರೋಪಿಸಿದರು....

ಫೋಟೋ - http://v.duta.us/ddQpCwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/2yKWDQAA

📲 Get Tumkur News on Whatsapp 💬