[udupi] - ಇಲ್ಲಿನ ರಸ್ತೆಯಲ್ಲಿ ಬಸ್‌ ತಿರುಗಿಸುವುದೇ ಕಷ್ಟ

  |   Udupinews

ಕಾರ್ಕಳ: ಇಲ್ಲಿನ ಪೇಟೆಯ ಹೃದಯ ಭಾಗ ತೀರ ಕಿರಿದಾಗಿದ್ದು ರಸ್ತೆ ಅಭಿವೃದ್ಧಿ ಕಾಣದೆ ಸುಗಮ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.

ವ್ಯವಸ್ಥಿತ ಪಾರ್ಕಿಂಗ್‌ ವ್ಯವಸ್ಥೆಯೂ ಇಲ್ಲಿಲ್ಲ. ನಗರದ ಪ್ರಮುಖ ಸಮಸ್ಯೆ ಇದಾದರೂ, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿ ಕಾರಿಗಳಾಗಲಿ, ಜನಪ್ರತಿನಿ ಧಿಗಳಾಗಲಿ ಇಚ್ಚಾಶಕ್ತಿ ಪ್ರದರ್ಶಿಸಿಲ್ಲ.

ಇದರಿಂದಾಗಿ ಮೂರು ಮಾರ್ಗ ಪ್ರದೇಶದಲ್ಲಿ ಬಸ್‌ ಚಾಲಕರಿಗೆ ಬಸ್‌ ತಿರುಗಿಸುವುದು ಸವಾಲಿನ ಕೆಲಸವೇ ಆಗಿದೆ. ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗುತ್ತಿದ್ದು, ಸವಾರರು ಟ್ರಾಫಿಕ್‌ ಸಮಸ್ಯೆಯಿಂದ ಪರಿತಪಿಸುವಂತಾಗುತ್ತಿದೆ.

ಇಕ್ಕಟ್ಟಾದ ರಸ್ತೆ

ತೀರಾ ಇಕ್ಕಟ್ಟಾಗಿರುವ ರಸ್ತೆಯಾಗಿರುವುದರಿಂದ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಕಿಷ್ಕಿಂದೆಯಂತಿರುವ ಈ ರಸ್ತೆಯಲ್ಲಿ ಪಾದಚಾರಿಗಳೂ ನಿತ್ಯ ಪರದಾಡುವಂತಾಗಿದೆ. ರಸ್ತೆಯನ್ನು ಅಗಲಗೊಳಿಸುವತ್ತ ಈ ವರೆಗೂ ಯಾರೂ ಗಮನ ವಹಿಸಿಲ್ಲ.

ಪಾರ್ಕಿಂಗ್‌ಗೆ ಇಲ್ಲ ಜಾಗ

ಪೇಟೆಯಲ್ಲಿ ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡಲಾಗುತ್ತಿದೆ. ಪಾರ್ಕಿಂಗ್‌ಗಾಗಿ ಸೂಕ್ತ ಜಾಗ ಗುರುತಿಸಿಲ್ಲ. ಇದರಿಂದ ಹಬ್ಬ ಹರಿದಿನಗಳು, ಉತ್ಸವಾದಿಗಳ ಸಂದರ್ಭದಲ್ಲಿ ಹೆಚ್ಚಿನ ಸಮಸ್ಯೆಯಾಗುತ್ತದೆ.

ರಸ್ತೆ ಬದಿ ಗುಂಡಿ

ಪೈಪ್‌ಲೆ„ನ್‌ ಅಳವಡಿಕೆಗೆ ಮುಖ್ಯರಸ್ತೆಬದಿ ಅಗೆದ ಗುಂಡಿ ಗಳನ್ನು ಮುಚ್ಚಿಲ್ಲ. ಬಸ್‌ ಸ್ಟಾಂಡ್‌ನಿಂದ ಬಂಡಿಮಠದವರೆಗಿನ ರಸ್ತೆ ಯಲ್ಲಿ ಇಂಗುಗುಂಡಿಯಂತೆ ಅಲ್ಲಲ್ಲಿ ಹೊಂಡವಿದ್ದು, ತೊಡಕಾಗಿ ಪರಿಣಮಿಸಿದೆ.

ಡಿಸಿ ಮುಂದಾಗಿದ್ದರು...

ಫೋಟೋ - http://v.duta.us/2qa4_wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/2WGYPQAA

📲 Get Udupi News on Whatsapp 💬