[udupi] - ಕಬ್ಬಿನಾಲೆ, ದೇವರಬಾಳು, ಕಟ್ಟಿನಾಡಿ: ಹಕ್ಕುಪತ್ರವಿಲ್ಲದೆ ಎಂಬತ್ತು ಕುಟುಂಬಗಳು ಅತಂತ್ರ

  |   Udupinews

ಕುಂದಾಪುರ: ಹಳ್ಳಿಹೊಳೆ ಗ್ರಾಮದ ಕಬ್ಬಿನಾಲೆ, ಕಟ್ಟಿನಾಡಿ, ದೇವರಬಾಳು ಪ್ರದೇಶದ ಹಲವು ಕುಟುಂಬಗಳಿಗೆ ಇನ್ನೂ ಜಾಗದ ಹಕ್ಕುಪತ್ರ ಸಿಕ್ಕಿಲ್ಲ.

ಜಿಲ್ಲಾ ಗಡಿ ಇತ್ಯರ್ಥವಾ ಗದೇ, ಅರಣ್ಯ ಪ್ರದೇಶ (ಡೀಮ್ಡ್ಫಾ ರೆಸ್ಟ್‌) ಎನ್ನುವ ಕಾರಣಕ್ಕೆ ಮನೆ, ಕೃಷಿ ಇದ್ದರೂ ಆ ಜಾಗದ ಆರ್‌ಟಿಸಿ ಸಿಗದೆ 80 ಕುಟುಂಬಗಳು ಅತಂತ್ರವಾಗಿವೆ. ನಕ್ಸಲ್‌ಪೀಡಿತ ಪ್ರದೇಶಗಳಾ ಗಿದ್ದ‌ ದೇವರಬಾಳು, ಕಬ್ಬಿನಾಲೆಯಲ್ಲಿರುವ ಈ ಕುಟುಂಬಗಳು ಅನೇಕ ಬಾರಿ ಅರ್ಜಿ ಹಾಕಿ ಇನ್ನೂ ಹಕ್ಕುಪತ್ರ ಸಿಗದೇ ಅಸಹಾಯಕವಾಗಿವೆ.

ನಾಲ್ಕೈದು ಬಾರಿ ಅರ್ಜಿ ವಾಸ್ತವಿರುವ ಜಾಗ ಹಾಗೂ ಬೇಸಾಯ ಮಾಡು ತ್ತಿರುವ ಕೃಷಿ ಭೂಮಿಯ ಆರ್‌ಟಿಸಿ ನೀಡುವಂತೆ ನಾಲ್ಕೈದು ಬಾರಿ ಅರ್ಜಿ ಹಾಕಿದ್ದೇವೆ. ಆದರೆ ಈವರೆಗೆ ಸಿಕ್ಕಿಲ್ಲ ಎನ್ನುತ್ತಾರೆ ಕಟ್ಟಿನಾಡಿಯ ಹಕ್ಕುಪತ್ರರಹಿತರು. ಈ ಬಗ್ಗೆ ಹಳ್ಳಿಹೊಳೆ ಗ್ರಾ.ಪಂ. ಅಧಿಕಾರಿಗಳು ಹೇಳುವುದೇ ಬೇರೆ-“ನಿವೇಶನ ರಹಿತರ ಪಟ್ಟಿ ಮಾಡಿದ್ದು, ಎಸ್‌ಸಿ – ಎಸ್‌ಟಿ ಜನರೇ ಹೆಚ್ಚು ಇರುವುದರಿಂದ ಐಟಿಡಿಪಿ ಇಲಾಖೆಗೆ ಕಳುಹಿಸಿದ್ದೇವೆ. ಅಲ್ಲಿಂದ ಇತ್ತೀಚೆಗಷ್ಟೇ ಅವರು 25 ವರ್ಷಗಳಿಂದ ವಾಸ್ತವ್ಯವಿರುವ ಬಗ್ಗೆ ದಾಖಲೆ ಕೇಳಿದೆ’ ಎನ್ನುತ್ತಾರೆ.

ಜಿಲ್ಲಾ ಗಡಿ ಇತ್ಯರ್ಥ ಸಮಸ್ಯೆ...

ಫೋಟೋ - http://v.duta.us/TOcGLAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/BIqjEAAA

📲 Get Udupi News on Whatsapp 💬