[udupi] - ಚಲಿಸುತ್ತಿದ್ದ ರೈಲಿನ ಎಸಿ ಬೋಗಿಯಲ್ಲಿ ಬೆಂಕಿ

  |   Udupinews

ಕುಂದಾಪುರ/ಉಪ್ಪುಂದ: ದಿಲ್ಲಿಯ ನಿಜಾಮುದ್ದೀನ್‌ನಿಂದ ಕೇರಳದತ್ತ ತೆರಳುತ್ತಿದ್ದ ಮಂಗಳ ಎಕ್ಸ್‌ಪ್ರೆಸ್‌ ರೈಲಿನ ಎಸಿ ಕೋಚ್‌ನಲ್ಲಿ ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡು ಭೀತಿ ಸೃಷ್ಟಿಯಾಯಿತು. ಆದರೆ ಅದೇ ಬೋಗಿಯಲ್ಲಿದ್ದ ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿತು.

ಮುಂಬಯಿಯಿಂದ ಎರ್ನಾಕುಲಂಗೆ ತೆರಳುತ್ತಿದ್ದ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ (12618) ರೈಲು ತಡರಾತ್ರಿ 1.20ರ ವೇಳೆಗೆ ಬೈಂದೂರು ದಾಟಿ ಖಂಬದಕೋಣೆ ಕಬ್ಬಿನಗದ್ದೆ ಬಳಿ ತಲುಪುವಾಗ ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಎಲ್ಲ ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದುದರಿಂದ ಆರಂಭದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಮಹಿಳೆಯೊಬ್ಬರು ಎಚ್ಚರವಾದಾಗ ಬೋಗಿಯಲ್ಲಿ ಬೆಂಕಿ ಕಂಡು ಗಾಬರಿಯಾದರು. ತತ್‌ಕ್ಷಣ ಜಾಗೃತರಾಗಿ ಎಲ್ಲರನ್ನೂ ಎಚ್ಚರಿಸಿದರು. ಅದರ ಪರಿಣಾಮ ರೈಲಿನ ಸಿಬಂದಿಯ ಗಮನಕ್ಕೆ ತರಲಾಯಿತು. ಕೂಡಲೇ ರೈಲನ್ನು ಬೈಂದೂರು ತಾಲೂಕಿನ ಸೇನಾಪುರ ಮತ್ತು ಬಿಜೂರು ಗ್ರಾಮದ ಮಧ್ಯೆ ನಿಲ್ಲಿಸಿ ಬೆಂಕಿ ನಂದಿಸಲಾಯಿತು.

ಎಸಿ ಕೋಚ್‌ನ ಅಗ್ನಿ ಶಮನಕ್ಕೆ ಸತತ ಮೂರು ತಾಸಿನ ಕಾರ್ಯಾಚರಣೆ ನಡೆಸಲಾಗಿದೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದರೂ ಅವರು ಬರುವುದರೊಳಗೆ ಸ್ಥಳೀಯರೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಎಸಿ...

ಫೋಟೋ - http://v.duta.us/6Za6hgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/q7WjTgAA

📲 Get Udupi News on Whatsapp 💬