[udupi] - ಪ್ರತಿವರ್ಷವೂ ಇಲ್ಲಿ ಟ್ಯಾಂಕರ್‌ ನೀರೇ ಗತಿ!

  |   Udupinews

ಬೈಂದೂರು: ಇಲ್ಲಿನ ಜನರಿಗೆ ಬೇಸಗೆ ಬಂದರೆ ಸಾಕು ಊರು ಬಿಟ್ಟು ಹೋಗಬೇಕೆನ್ನುವ ಪರಿಸ್ಥಿತಿ ಇದೆ. ಉಪ್ಪು ನೀರಿನ ಪ್ರದೇಶವಾದ್ದರಿಂದ ಮಳೆಗಾದಲ್ಲೂ ಇಲ್ಲಿ ಸಂಕಷ್ಟ ತಪ್ಪಿಲ್ಲ. ಜಿಲ್ಲೆಯ ಅತೀ ದೊಡ್ಡ ಗ್ರಾ.ಪಂ ವ್ಯಾಪ್ತಿಯಾಗಿರುವ ಶಿರೂರಿನ ಕಳಿಹಿತ್ಲು,ಕರಾವಳಿ,ದೊಂಬೆ, ಬುಕಾರಿ ಕಾಲನಿ, ಹಡವಿನಕೋಣೆ, ಕೆಸರಕೋಡಿ, ಕರಿಕಟ್ಟೆ, ಆರ್ಮಿ, ಮುಂತಾದ ಭಾಗಗಳು ಪ್ರತಿವರ್ಷವೂ ನೀರಿಲ್ಲದೆ ಟ್ಯಾಂಕರ್‌ ನೀರನ್ನೇ ಅವಲಂಬಿಸಬೇಕಾಗಿದೆ.

ಈಡೇರದ ಶಾಶ್ವತ ಯೋಜನೆಗಳು

ಶಿರೂರಿನ ಈ ಭಾಗದಲ್ಲಿ ಪ್ರತಿ ಬೇಸಗೆಯಲ್ಲಿ ನೀರಿಗೆ ಕಾಯಬೇಕು. ಶಾಶ್ವತ ಯೋಜನೆಗೆ ಸಂಬಂಧಪಟ್ಟ ಯಾರೂ ಗಮನಕೊಡದ್ದರಿಂದ ಜನರು ಸಂಕಟಪಡುವಂತಾಗದೆ. ಇಲ್ಲಿ 25,000ರಿಂದ 30,000 ಜನಸಂಖ್ಯೆಯಿದೆ. 34 ಬೋರ್‌ವೆಲ್‌ 28 ತೆರೆದ ಬಾವಿಗಳಿದ್ದರೂ ನೀರಿನ ಸಮಸ್ಯೆ ಕಾಡುತ್ತಲೇ ಇದೆ. ಆದರೆ ಇಲ್ಲಿಗೆ ಹೊರಗಡೆಯಿಂದ ನೀರು ಸರಬರಾಜೂ ಆಗುತ್ತಿಲ್ಲ. ಊರನ್ನು ರೈಲ್ವೇ ಮಾರ್ಗ ಬೇರ್ಪಡಿಸಿದಂತೆ ಇರುವುದರಿಂದ ಪೈಪ್‌ಲೈನ್‌ ಹಾಕಲು ಆಗುತ್ತಿಲ್ಲ. 2015ರಲ್ಲಿ ಶಿರೂರಿಗೆ ಆಗಮಿಸಿದ ಅಂದಿನ ಹಾಗೂ ಪಂಚಾಯತ್‌ರಾಜ್‌ ಸಚಿವರು ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಸಿಹಿ ನೀರನ್ನಾಗಿ ಮಾರ್ಪಡಿಸುವ ಯೋಜನೆ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿದೆ. ಶಿರೂರು, ಪಡುವರಿ, ಯಡ್ತರೆ, ಬೈಂದೂರು ಸೇರಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತು ಹತ್ತು ವರ್ಷಗಳಿಂದ ಚರ್ಚೆಯಾಗುತ್ತಲೇ ಇದೆ....

ಫೋಟೋ - http://v.duta.us/J1RzVgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/_05iDwAA

📲 Get Udupi News on Whatsapp 💬