[udupi] - ಪಿಲ್ಲರ್‌ಗಳ ಕಲ್ಲು ಕುಸಿತ, ಆತಂಕದಲ್ಲಿ ಗ್ರಾಮಸ್ಥರು

  |   Udupinews

ಹೆಬ್ರಿ: ಚಾರ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಹೆಬ್ರಿ ಕುಂದಾಪುರ ಮಾರ್ಗದ ನವೋದಯ ಶಾಲೆ ಬಳಿ ಇರುವ ಹೆಬ್ರಿ ಬೇಳಂಜೆ ಸೇತುವೆ ಕುಸಿಯುವ ಭೀತಿಯಲ್ಲಿದೆ.

1958ರಲ್ಲಿ ನಿರ್ಮಾಣವಾದ ಈ ಸೇತುವೆಯ ಪ್ರಮುಖ ಪಿಲ್ಲರ್‌ಗಳ ತಳದಲ್ಲೇ ಕಲ್ಲುಗಳು ಕುಸಿದಿದ್ದು ಅಪಾಯದಲ್ಲಿದೆ. ನಿರ್ಮಾಣವಾದ ಸಂದರ್ಭದಲ್ಲೇ ಕಳಪೆ ಕಾಮಗಾರಿಯ ಆರೋಪ ಕೇಳಿಬಂದಿದ್ದು ಸ್ಥಳೀಯರಾದ ಬೇಳಂಜೆ ರಮಾನಂದ ಹೆಗ್ಡೆ ಅವರು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಈ ಬಗ್ಗೆ ಹೋರಾಟವನ್ನೂ ನಡೆಸಿದ್ದರು.

1980ರಲ್ಲಿ ಸೇತುವೆ ಒಂದು ಪಿಲ್ಲರ್‌ನ ಕಲ್ಲುಗಳು ಕುಸಿದಿದ್ದು ಬಳಿಕ ಇದಕ್ಕೆ ತೇಪೆ ಹಾಕಲಾಗಿತ್ತು. ಈಗ ಈ ತೇಪೆ ಹಾಕಿದ ಪಿಲ್ಲರ್‌ ಸಿಮೆಂಟ್‌ ಎದ್ದಿದೆ. ಜತೆಗೆ ಇನ್ನೊಂದು ಪ್ರಮುಖ ಪಿಲ್ಲರ್‌ನ ಕಲ್ಲುಗಳು ಕುಸಿದಿವೆ. ಮಳೆಗಾಲದಲ್ಲಿ ನೀರಿನ ರಭಸಕ್ಕೆ ಇಡೀ ಸೇತುವೆ ಕುಸಿಯುವ ಆತಂಕ ಎದುರಾಗಿದೆ.

ದುರಸ್ತಿಗೆ ಸೂಕ್ತ ಕಾಲ

ಮಳೆಗಾಲದಲ್ಲಿ ಉಕ್ಕಿ ಹರಿಯುವ ಸೀತಾನದಿ ಈಗ ಬತ್ತಿ ಹೋಗಿದೆ. ಈ ಸಮಯದಲ್ಲಿ ತಾತ್ಕಲಿಕ ದುರಸ್ತಿ ಕಾರ್ಯ ಮಾಡಲು ಅನುಕೂಲವಾಗಿದ್ದು, ಕ್ರಮ ಕೈಗೊಂಡಲ್ಲಿ ಸಂಭಾವ್ಯ ಅಪಾಯವನ್ನು ತಪ್ಪಿಸಬಹುದು.

ಸಂಪರ್ಕ ಕಡಿತಗೊಳ್ಳುವ ಭೀತಿ

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ದುರಸ್ಥಿ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೆಬ್ರಿ ಬೇಳಂಜೆ ಸಂಪರ್ಕ ಕಡಿತಗೊಳ್ಳುವ ಭೀತಿ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ....

ಫೋಟೋ - http://v.duta.us/qg9B0AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/gdqiygAA

📲 Get Udupi News on Whatsapp 💬