[udupi] - ಬೆಳಪು: ದುರ್ನಾತ ಬೀರುತ್ತಿರುವ ಮಾಂಸದ ತ್ಯಾಜ್ಯಗಳು !

  |   Udupinews

ಕಾಪು: ಗ್ರಾಮೀಣ ಪ್ರದೇಶದ ಎಲ್ಲೆಡೆ ಕಸ, ತ್ಯಾಜ್ಯದ ವಿಲೇವಾರಿಯದ್ದೇ ಬಲುದೊಡ್ಡ ಸಮಸ್ಯೆಯಾಗಿದ್ದು, ರಾಜ್ಯ ಮತ್ತು ರಾಷ್ಟÅ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಬೆಳಪು ಗ್ರಾಮ ಕೂಡಾ ಈ ಸಮಸ್ಯೆಯಿಂದ ಹೊರತಾಗಿಲ್ಲ. ಅಭಿವೃದ್ಧಿಯಲ್ಲಿ ದೊಡ್ಡಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಬೆಳಪು ಗ್ರಾಮದ ವಿವಿಧೆಡೆ ಹೊರಗಿನ ಗ್ರಾಮಗಳ ತ್ಯಾಜ್ಯದ್ದೇ ಬಲುದೊಡ್ಡ ವ್ಯಾಜ್ಯವಾಗಿಬಿಟ್ಟಿದೆ.

ಗಬ್ಬೆದ್ದು ನಾರುತ್ತಿರುವ ಮುಖ್ಯ ಪ್ರದೇಶಗಳು

ಬೆಳಪು ಗ್ರಾಮದ ಕನಸಿನ ಕೂಸಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ವಿಜ್ಞಾನ ಸಂಶೋಧನಾ ಕೇಂದ್ರ, ಮೀಸಲು ಅರಣ್ಯ ಪ್ರದೇಶ, ಸರಕಾರಿ ಪಾಲಿಟೆಕ್ನಿಕ್‌ ಕೇಂದ್ರ ಹಾಗೂ ರೈಲ್ವೇ ಟ್ರಾÂಕ್‌ ಬಳಿಯ ಪ್ರದೇಶಗಳ‌ು ಕಸದಿಂದ ಮುಚ್ಚಿ ಹೋಗಿವೆ. ಇಲ್ಲಿ ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚಾಗಿ ಕಸ-ತ್ಯಾಜ್ಯಗಳನ್ನು, ಕೋಳಿ – ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಎಸೆದು ಹೋಗುತ್ತಿದ್ದು, ಇದರಿಂದಾಗಿ ಬೆಳಪು ಗ್ರಾಮದ ಬಹುತೇಕ ಪ್ರದೇಶವು ಸಂಪೂರ್ಣ ಗಬ್ಬೆದ್ದು ನಾರುವ‌ಂತಾಗಿದೆ.

ಹೊರಗಿನ ತ್ಯಾಜ್ಯಗಳದ್ದೇ ಸುದ್ದಿ

ಕಸ – ತ್ಯಾಜ್ಯ ಎಸೆಯಬೇಡಿ ಎಂದು ಎಷ್ಟೇ ಬೋರ್ಡ್‌ ಹಾಕಿ ಎಚ್ಚರಿಕೆ ನೀಡಿದರೂ, ರಾತ್ರಿಯ ವೇಳೆ ಇಲ್ಲಿಗೆ ವಾಹನಗಳಲ್ಲಿ ಬರುವ ತ್ಯಾಜ್ಯ ಸೃಷ್ಟಿಯ ವ್ಯಕ್ತಿಗಳು ತಮಗೆ ಇಷ್ಟ ಬಂದ ಪ್ರದೇಶಗಳಲ್ಲಿ ತ್ಯಾಜ್ಯವನ್ನು ಸುರಿದು, ಬೆಳಪು ಗ್ರಾಮದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಬೆಳಪು ಗ್ರಾಮದ ವ್ಯಾಪ್ತಿಗೆ ಬರುವ ಕುಂಜೂರು ರೈಲ್ವೇ ಬ್ರಿಡ್ಜ್ನಿಂದ ಹಿಡಿದು ಬೆಳಪು ರೈಲ್ವೇ ಬ್ರಿಡ್ಜ್ನವರೆಗೂ ರಸ್ತೆ ಬದಿಯಲ್ಲಿ ತ್ಯಾಜ್ಯದ ರಾಶಿ ಕಾಣುತ್ತಿದ್ದು, ಇದರಿಂದಾಗಿ ಭಾಗದ ಜನರು ಮತ್ತು ಪಾದಚಾರಿ,ವಾಹನಗಳು ಸುತ್ತು ಬಳಸಿ ತಮ್ಮೂರಿಗೆ ನಡೆದಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ....

ಫೋಟೋ - http://v.duta.us/lxJRTQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/iAZlGgAA

📲 Get Udupi News on Whatsapp 💬