[uttara-kannada] - ಕಲ್ಲು ಕ್ವಾರಿ: ಬಗೆಹರಿಯದ ಗೊಂದಲ

  |   Uttara-Kannadanews

ಕಾರವಾರ: ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಕಾರವಾರ ಸಮೀಪದ ಹೆದ್ದಾರಿ ಪಕ್ಕದ ಜಿ.ಕೆ. ರಾಮ್‌ ಕಲ್ಲು ಕ್ವಾರಿ ಕ್ರಶರ್‌ನ್ನು ಕಂದಾಯ ಅಧಿಕಾರಿಗಳು ಶನಿವಾರ ವೀಕ್ಷಿಸಿದ್ದು, ಲೀಜ್‌ಗೆ ಸಂಬಂಧಿಸಿದ ದಾಖಲೆಗಳನ್ನು ಅರಣ್ಯ ಇಲಾಖೆ ಈತನಕ ಜಿಲ್ಲಾಧಿಕಾರಿಗಳಿಗಾಗಲಿ, ಸಹಾಯಕ ಕಮಿಷನರ್‌ ಕಚೇರಿಗಾಗಲಿ ತಲುಪಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಅರಣ್ಯ ಇಲಾಖೆಯದು ಎನ್ನಲಾದ ಜಾಗೆಯ ಸರ್ವೆ ನಂಬರ್‌ನಲ್ಲಿ ಸ್ವಲ್ಪ ಭಾಗ ಕ್ವಾರಿಗೆ ನೀಡಲಾಗಿದೆ ಎನ್ನಲಾಗುತ್ತಿದೆ. ಕ್ರಶರ್‌ ಲೀಜ್‌ ಅವಧಿ ಮುಗಿದಿದೆ. ಆದರೆ ಕ್ವಾರಿ ಲೀಜ್‌ ಮುಂದುವರಿದಿದೆ. ಅಲ್ಲದೇ ಕ್ವಾರಿಗೆ ತೆರಳುವ ರಸ್ತೆಯ ಭೂಮಿ ಸಹ ಲೀಜ್‌ ಮೇಲೆ ಖಾಸಗಿ ಸಂಸ್ಥೆ ಹೆಸರಿಗೆ ಇದೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಅರಣ್ಯ ನೀಡಬೇಕಾಗಿದೆ.

ರಾಹೆ 66ನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಆರಂಭವಾದ ನಂತರ ಕ್ರಶರ್‌ ಇರುವ ಸ್ಥಳದ ಪ್ರಕರಣ ಹಲವು ದಿನಗಳಿಂದ ಕ್ರಶರ್‌ ಮಾಲಿಕರ ಹಾಗೂ ರಾಹೆ ಅಧಿಕಾರಿಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಚತುಷ್ಟಥ ಹೆದ್ದಾರಿ ಹಾದು ಹೋಗುವ ಒಂದು ಬದಿಗೆ ಐಎನ್‌ಎಸ್‌ ಕದಂಬ ನೌಕಾನೆಲೆ, ಇನ್ನೊಂದು ಬದಿಗೆ ಕಲ್ಲು ಕ್ವಾರಿ ಕ್ರಶರ್‌ ಇದೆ. ಹೆದ್ದಾರಿ ವಿಸ್ತರಣೆಗೆ ಅನಿವಾರ್ಯವಾಗಿ ಕ್ವಾರಿ ಕ್ರಶರ್‌ ಯುನಿಟ್ ತೆರವುಗೊಳಿಸಲು ಈ ಹಿಂದೆಯೇ ಅಧಿಕಾರಿಗಳು ಮುಂದಾದಾಗ ಕ್ವಾರಿ ಕ್ರಶರ್‌ ಮಾಲಿಕರು ಕ್ವಾರಿ ಲೀಜ್‌ 2023 ರವರೆಗೆ ಇದೆ ಎಂದು ಹೇಳಿದ ಕಾರಣ ರಸ್ತೆ ಅಗಲೀಕರಣ ಕಾಮಗಾರಿ ತಡೆ ಹಿಡಿದಿದ್ದರು. ಜೊತೆಗೆ ರಾಜಕೀಯ ಒತ್ತಡಗಳು ಬರಲಾರಂಭಿಸಿದ ಮೇಲೆ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು....

ಫೋಟೋ - http://v.duta.us/hp2BZgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/lY92FQAA

📲 Get Uttara Kannada News on Whatsapp 💬