[uttara-kannada] - ಸ್ಕೇಟಿಂಗ್‌ನಲ್ಲಿ ಸಾಖೀಬ್‌ ದಾಖಲೆ

  |   Uttara-Kannadanews

ಕಾರವಾರ: ನಗರದ ಅಜ್ವಿ ಸಭಾಂಗಣದಲ್ಲಿ ರವಿವಾರ ಬೆಳಗ್ಗೆ ಲಿಂಬೋ ಸ್ಪಿನ್ನಿಂಗ್‌ ಸ್ಕೇಟಿಂಗ್‌ನಲ್ಲಿ ಬಾಲಕ ಮಹಮ್ಮದ್‌ ಸಾಖೀಬ್‌ 25 ನಿಮಿಷಗಳ ಕಾಲ 180 ಡಿಗ್ರಿಯಲ್ಲಿ ಸ್ಪಿನ್ನಿಂಗ್‌ ಸ್ಕೇಟಿಂಗ್‌ ಮಾಡಿ ವಿಶ್ವ ದಾಖಲೆ ಬರೆದ.

ಏಷಿಯಾ ಬುಕ್‌ ಆಫ್‌ ರೆಕಾರ್ಡ್‌ನ ಮ್ಯಾನೇಜರ್‌ ಸೇರಿದಂತೆ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ನ ಅಧಿಕಾರಿಗಳು, ನ್ಯಾಶನಲ್ ಬುಕ್‌ ಆಫ್‌ ರೆಕಾರ್ಡ್‌ನ ಅಧಿಕಾರಿ, ರೆಕಾರ್ಡ್‌ ಹೋಲ್ಡರ್ ರಿಪಬ್ಲಿಕ್‌ ಅಧಿಕಾರಿ, ಕೃಗಾ ಅಣುಸ್ಥಾವರದ ಸ್ಥಳ ನಿರ್ದೇಶಕ ದೇಶಪಾಂಡೆ ಅವರ ಸಮ್ಮುಖದಲ್ಲಿ ಸತತವಾಗಿ ಸ್ಪಿನ್ನಿಂಗ್‌ ಸ್ಕೇಟಿಂಗ್‌ ಮಾಡುವ ಮೂಲಕ ನೆರೆದಿದ್ದ ಜನ ಹುಬ್ಬೇರಿಸುವಂತೆ ಮಾಡಿದ.

ವಿಶ್ವದಲ್ಲಿ ಈತನಕ ಸತತ 16 ನಿಮಿಷಗಳ ಕಾಲ ಲಿಂಬೋ ಸ್ಪಿನ್ನಿಂಗ್‌ ಸ್ಕೇಟಿಂಗ್‌ ಮಾಡಿದ ದಾಖಲೆಯಿದೆ. ಈ ದಾಖಲೆಯನ್ನು ಕೈಗಾದ ಬಾಲಕ ಸಾಖೀಬ್‌ ಮುರಿದು ಹೊಸ ದಾಖಲೆ ಬರೆದನು. 25 ನಿಮಿಷ ಕಾಲ ಸತತ 1000 ಸುತ್ತು ಲಿಂಬೋ ಸ್ಪಿನ್ನಿಂಗ್‌ ಸ್ಕೇಟಿಂಗ್‌ ಮಾಡಿದ್ದು ವಿಶ್ವದಾಖಲೆ ಸೇರಲಿದೆ ಎಂದು ಏಷಿಯಾ ಬುಕ್‌ ಆಫ್‌ ರೆಕಾರ್ಡ್‌ನ ಮ್ಯಾನೇಜರ್‌ ಹರೀಶ್‌ ಬೆಂಗಳೂರು ಮಾಧ್ಯಮಗಳಿಗೆ ವಿವರಿಸಿದರು.

ಬಾಲಕ ಸಾಖೀಬ್‌ ಈಗ ತಾನೆ 4 ವರ್ಷ ಪೂರೈಸಿ 5ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಇಷ್ಟು ಚಿಕ್ಕವಯಸ್ಸಿನ ಬಾಲಕನ ಸಾಧನೆ ಸ್ಕೇಟಿಂಗ್‌ ಇತಿಹಾಸದಲ್ಲಿ ಇಂದು (ಏ.28) ದಾಖಲಾಯಿತು. ಇದು ಕರ್ನಾಟಕ ಮತ್ತು ಭಾರತಕ್ಕೆ ವಿಶ್ವಮಟ್ಟದಲ್ಲಿ ಹೆಸರು ತಂದು ಕೊಟ್ಟಿದೆ ಎಂದು ಅವರು ಬಣ್ಣಿಸಿದರು....

ಫೋಟೋ - http://v.duta.us/FF_7FgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/CJVG4wAA

📲 Get Uttara Kannada News on Whatsapp 💬