[yadgiri] - 6 ವರ್ಷ ಗತಿಸಿದರೂ ಉದ್ಘಾಟನೆಯಾಗದ ವಾಣಿಜ್ಯ ಮಳಿಗೆಗಳು

  |   Yadgirinews

ಗುರುಮಠಕಲ್: ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡು ಲಕ್ಷ್ಮಿನಗರ ಬಡಾವಣೆಯಲ್ಲಿ ಪುರಸಭೆಯಿಂದ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಉದ್ಘಾಟನೆಗೆ ಮುನ್ನವೇ ಕುಸಿಯುವ ಹಂತಕ್ಕೆ ತಲುಪಿದ್ದು, ಇದರಿಂದಾಗಿ ಲಕ್ಷಾಂತರ ಹಣ ನೀರುಪಾಲಾಗುವ ಹಂತಕ್ಕೆ ತಲುಪಿದೆ.

2011-12ನೇ ಸಾಲಿನ ಎಸ್‌ಎಫ್‌ಸಿ ಅನುದಾನದಡಿ ಎಂಟು ಲಕ್ಷ ರೂ. ವೆಚ್ಚದಲ್ಲಿ ಐದು ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಆದರೆ ಇದುವರೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸದ ಸಣ್ಣ ಕಾರಣದಿಂದಾಗಿ ಉದ್ಘಾಟನೆಯಾಗದೆ ನನೆಗುದಿಗೆ ಬಿದ್ದಿದೆ. ಇದುವರೆಗೆ ಪುರಸಭೆಗೆ ಬಾಡಿಗೆ ರೂಪದಲ್ಲಿ ಬರಬೇಕಾದ ಲಕ್ಷಾಂತರ ರೂ. ಹಣ ಕೈತಪ್ಪಿದಂತಾಗಿದೆ. ಪಟ್ಟಣದಲ್ಲಿ ಮಳಿಗೆಗಳಿಗೆ ಭಾರಿ ಬೇಡಿಕೆ ಇದೆ. ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳಿಗೆ ವ್ಯಾಪಾರ§ರು ಎಂಟರಿಂದ ಹತ್ತು ಸಾವಿರ ಬಾಡಿಗೆ ನೀಡುತ್ತಿದ್ದಾರೆ.

ಪುರಸಭೆ ವತಿಯಿಂದ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳು ಸಮಯಕ್ಕೆ ಉದ್ಘಾಟನೆಯಾಗಿದ್ದರೆ ಅವು ನಿರ್ಮಿಸಿದ ಹಣವಲ್ಲದೆ ಹೆಚ್ಚು ಬಾಡಿಗೆ ಹಣ ಬರುತ್ತಿತ್ತು. ಭದ್ರತೆ ಇಲ್ಲದ ಕಾರಣ ಅಲೆಮಾರಿ ಜನಾಂಗದವರು ತಮಗೆ ಬೇಕಾದಂತೆ ಮಳಗೆಗಳನ್ನು ಉಪಯೋಗಿಸುತ್ತಿದ್ದಾರೆ. ನೂತನವಾಗಿ ಚುನಾಯಿತರಾದ ಪುರಸಭೆ ಸದಸ್ಯರು ಇದರ ಬಗ್ಗೆ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಒತ್ತಾಯವಾಗಿದೆ.

ಫೋಟೋ - http://v.duta.us/dp3WXQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/KN4vEQAA

📲 Get Yadgiri News on Whatsapp 💬