ಅಭಿವೃದ್ಧಿಯತ್ತ ಪುರಸಭೆ ಸದಸ್ಯರು ಹರಿಸಲಿ ಚಿತ್ತ

  |   Bidarnews

ಶಶಿಕಾಂತ ಕೆ.ಭಗೋಜಿ

ಹುಮನಾಬಾದ: ಪುರಸಭೆ ಚುನಾವಣೆ ಮುಗಿದು ಈಗಾಗಲೇ ಫಲಿತಾಂಶ ಪ್ರಕಟಗೊಂಡಿದೆ. ಇನ್ನೇನು ಸರ್ಕಾರದ ನಿಯಮಾನುಸಾರ ಹೊಸ ಆಡಳಿತ ಮಂಡಳಿ ಸಭೆ ಸೇರಿ ನಗರದಲ್ಲಿನ ಜ್ವಲಂತ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಇತ್ಯರ್ಥಪಡಿಸುವತ್ತ ಚಿತ್ತ ಹರಿಸಬೇಕಿದೆ.

ಕೋಟ್ಯಂತರ ವೆಚ್ಚವಾದರೂ ಉದ್ದೇಶಿತ ಕಾರ್ಯ ಕೈಗೊಡದೇ ಅಪೂರ್ಣ ಸ್ಥಿತಿಯಲ್ಲಿರುವ ಯುಜಿಡಿ ಕಾಮಗಾರಿ ಸಾರ್ವಜನಿಕರಿಗೆ ಬಳಕೆ ಬರುವ ರೀತಿಯಲ್ಲಿ ನೋಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ನೂತನ ಆಡಳಿತ ಮಂಡಳಿ ಮೇಲಿದೆ. ಅಂಬೇಡ್ಕರ್‌ ವೃತ್ತದಿಂದ ವಾಂಜ್ರಿ ವರೆಗಿನ ರಸ್ತೆ ವಿಸ್ತರಣೆ ಹಾಗೂ ವಿಭಜಕ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ಗ್ರಿಲ್ ಅಳವಡಿಕೆ ಕಾರ್ಯ ಪೂರ್ಣಗೊಳ್ಳಬೇಕು.

ಪಟ್ಟಣದ ಪ್ರತಿಯೊಂದು ಮಾರ್ಗಗಳ ರಸ್ತೆಗಳು ವಿಸ್ತರಣೆಗೊಂಡು ಹಸಿರಿನಿಂದ ಕಂಗೊಳಿಸಿ, ಸಾರ್ವಜನಿಕರ ಕಣ್ಮನ ಸೆಳೆಯಬೇಕು ಎನ್ನುವ ಉದ್ದೇಶದಿಂದ ಕ್ಷೇತ್ರದ ಶಾಸಕರೂ ಆದ ಸಚಿವ ರಾಜಶೇಖರ ಪಾಟೀಲ ಅವರು ಬಿಡುಗಡೆಗೊಳಿಸಿದ ಕೋಟ್ಯಂತರ ರೂ.ದಲ್ಲಿ ರಸ್ತೆ ವಿಭಜಕ ನಿರ್ಮಿಸಿದರೂ ಕೂಡ ಅಂಬೇಡ್ಕರ ವೃತ್ತದಿಂದ ವಾಂಜ್ರಿ ವರೆಗೆ ಹೂ-ಗಿಡಗಳಿಂದ ಕಂಗೊಳಿಸಬೇಕಾದ ರಸ್ತೆ ವಿಭಜಕ ಸಾರ್ವಜನಿಕ ತಿಪ್ಪೆಗುಂಡಿಗಳಾಗಿ ಪರಿವರ್ತನೆಯಾಗಿವೆ. ಸ್ವಚ್ಛತೆ ಕಾಪಾಡಿ ಹಸಿರುಮಯ ಮಾಡಬೇಕಿದೆ.

ಒಂದೂವರೆ ದಶಕದ ಹಿಂದೆ ವೀರಣ್ಣ ಪಾಟೀಲ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸಿ, ಸಾರ್ವಜನಿಕರ ಆಕರ್ಷಣೆಗೆ ಕಾರಣವಾದ ಪುರಸಭೆ ಉದ್ಯಾನವೀಗ ಹೂ-ಗಿಡಗಳಿಲ್ಲದೇ ಭಣಗೊಡುತ್ತಿದೆ. ಉದ್ಯಾನ ಅಭಿವೃದ್ಧಿಗೆ ಈವರೆಗೆ ಬಿಡುಗಡೆಯಾದ ಲಕ್ಷಾಂತರ ಹಣದಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿಯಾಗಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ....

ಫೋಟೋ - http://v.duta.us/XbjC8wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Knl7UQAA

📲 Get Bidar News on Whatsapp 💬