ಅರಣ್ಯ ಕೃಷಿಗೆ ಸಸಿ ಬೇಕೇ? ಬೆಲಸಿಂದ ಸಸ್ಯಕಾಶಿಗೆ ಬನ್ನಿ

  |   Hassannews

ಚನ್ನರಾಯಪಟ್ಟಣ: ಅರಣ್ಯ ಕೃಷಿಗೆ ಹೆಚ್ಚು ಪ್ರಾಮುಖ್ಯತೆ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು ಒಂದು ಹಾಗೂ ಮೂರು ರೂ.ಗೆ ಗಿಡವನ್ನು ತಾಲೂಕಿನ ಅರಣ್ಯ ಇಲಾಖೆ ವತಿಯಿಂದ ನೀಡಲು ಮುಂದಾಗಿದ್ದು, ರೈತರು ಹಾಗೂ ವೃಕ್ಷ ಪ್ರಿಯರು ಇದರ ಲಾಭ ಪಡೆಯಲು ಜೂ.10 ರಂದು ಬೆಲಸಿಂದ ಸಸ್ಯಕಾಶಿಗೆ ಆಗಮಿಸಬೇಕಿದೆ.

ಇಂದೇ ಆಗಮಿಸಿ: ಸಸಿಗಳನ್ನು ಪಡೆಯಲು ಆಸಕ್ತರು ಕೃಷಿ ಭೂಮಿ ಪಹಣಿ, ಬ್ಯಾಂಕ್‌ ಖಾತೆಯ ಪುಸ್ತಕ ಹಾಗೂ ಎರಡು ಭಾವ ಚಿತ್ರದೊಂದಿಗೆ ಬೆಲಸಿಂದ ಸಸ್ಯಕಾಶಿಗೆ ಆಗಮಿಸಿ ಒಂದು ರೂ. ನಂತೆ ತಮಗೆ ಅಗತ್ಯವಿರುವಷ್ಟು ಸಸಿಗಳನ್ನು ಪಡೆಯಬಹುದು. ಹೀಗೆ ಕಡಿಮೆ ಬೆಲೆಗೆ ಕೊಂಡ ಸಸಿಗಳನ್ನು ಮೂರು ವರ್ಷಗಳು ಪೋಷಣೆ ಮಾಡುವುದಕ್ಕೆ ಸರ್ಕಾರ ಪ್ರೋತ್ಸಾಹ ಧನವನ್ನು ನೀಡಲಿದೆ. ಇಂತಹ ಸದವಕಾಶವನ್ನು ತಾಲೂಕಿನ ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದರೆ ಇಂದೇ ಬೆಲಸಿಂದ ಸಸ್ಯಕಾಶಿಗೆ ಬನ್ನಿ.

ಬ್ಯಾಂಕ್‌ ಖಾತೆಗೆ ಹಣ ಜಮಾ: ಕಡಿಮೆ ಬೆಲೆಗೆ ಸಸಿಗಳು ದೊರೆಯುತ್ತವೆ ಎಂದು ಅಗತ್ಯಕ್ಕಿಂತ ಹೆಚ್ಚು ಕೊಳ್ಳುವಂತಿಲ್ಲ. ತಾವು ಕೊಂಡ ಸಸಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಖಲು ಮಾಡಿಕೊಂಡು ಮುಂದಿನ ವರ್ಷ ತಮ್ಮ ಕೃಷಿ ಭೂಮಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಗಿಡಗಳು ಉತ್ತಮವಾಗಿ ಬೆಳೆದಿದ್ದರೆ ತಲಾ ಗಿಡಕ್ಕೆ ಪ್ರಥಮ ವರ್ಷ 30 ರೂ. ದ್ವಿತೀಯ ವರ್ಷ 30 ರೂ. ಹಾಗೂ ತೃತೀಯ ವರ್ಷ 40 ರೂ.ನಂತೆ ನೇರವಾಗಿ ತಮ್ಮ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಿದ್ದಾರೆ....

ಫೋಟೋ - http://v.duta.us/jtzvFgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/JRGaDgAA

📲 Get Hassan News on Whatsapp 💬