ಆಂಗ್ಲ ಮಾಧ್ಯಮದಿಂದ ಪ್ರಾಥಮಿಕ ಶಿಕ್ಷಣಕ್ಕೆ ಹಿನ್ನಡೆ

  |   Mysorenews

ಮೈಸೂರು: ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಹೆಚ್ಚು ಹೆಚ್ಚು ತೆರೆಯುತ್ತಿರುವ ಸರ್ಕಾರದ ನಡೆ ಕನ್ನಡ ವಿರೋಧಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಕಲಾಮಂದಿರ ಆವರಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಕನ್ನಡ ಮಾಧ್ಯಮ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಡಳಿತಕ್ಕೂ ತೊಂದರೆ: ಪ್ರಾಥಮಿಕ ಶಿಕ್ಷಣದಲ್ಲಿ ನೆಲದ ಭಾಷೆ ಅವಜ್ಞೆಗೆ ಗುರಿಯಾದರೆ ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೆ ಹಿನ್ನಡೆಯಾಗಲಿದೆ. ಜೊತೆಗೆ ಉನ್ನತ ಶಿಕ್ಷಣಕ್ಕೂ ಹೊಡೆತ ಬೀಳುತ್ತದೆ. ಸುಲಲಿತ ಆಡಳಿತಕ್ಕೂ ತೊಂದರೆಯಾಗುತ್ತದೆ ಎಂಬುದನ್ನು ನಮ್ಮ ಸರ್ಕಾರಗಳು ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.

ಕನ್ನಡ ಮಾಧ್ಯಮದ ಜೊತೆಗೆ ಬೇರೆ ಭಾಷೆಗಳನ್ನು ಒಂದು ಭಾಷೆಯಾಗಿ ಕಲಿತರೆ ತಪ್ಪೇನು ಇಲ್ಲ. ಆದರೆ, ಪ್ರಾಥಮಿಕ ಶಿಕ್ಷಣದಲ್ಲಿ ಬೇರೆ ಭಾಷೆಯನ್ನು ಮಾಧ್ಯಮವಾಗಿ ಕಲಿಯುವುದರಿಂದ, ಆ ಮಗುವಿನ ಯೋಚನಾ ಶಕ್ತಿ, ಸೃಜನಾತ್ಮಕ ಶಕ್ತಿಯೇ ಕುಂದಿ ಹೋಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟರು.

ಎಳವೆಯಲ್ಲಿ ಮಗುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯವೋ ಹಾಗೆಯೇ ಪ್ರಾಥಮಿಕ ಶಿಕ್ಷಣವನ್ನೂ ತಾಯಿ ಭಾಷೆ ಅಂದರೆ ನೆಲದ ಭಾಷೆಯಲ್ಲಿ ಕಲಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಪ್ರಾಥಮಿಕ ಶಿಕ್ಷಣವನ್ನು ನೆಲದ ಭಾಷೆಯಲ್ಲಿ ನೀಡದೇ ಹೋದರೆ, ಮಗುವಿಗೆ ತಾಯಿ ಎದೆ ಹಾಲು ನೀಡದೇ ಇಂಗ್ಲಿಷಿನ ಅಂದರೆ ಹೊರಗಿನ ಅನ್ನ ತಿನ್ನಿಸಿದಂತಾಗುತ್ತದೆ. ಆ ಹಸುಗೂಸಿಗೆ ಹೊರಗಿನ ಗಟ್ಟಿ ಅನ್ನ ಅರಗಿಸಿಕೊಳ್ಳಲಾದೀತೇ ಎಂದು ಪ್ರಶ್ನಿಸಿದರು....

ಫೋಟೋ - http://v.duta.us/A2MePwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/8d78WgAA

📲 Get Mysore News on Whatsapp 💬