ಉ.ಕ.ಕ್ಕೆ ಬೇಕು ತುರ್ತು ಚಿಕಿತ್ಸಾಲಯ

  |   Uttara-Kannadanews

ಹೊನ್ನಾವರ: ಜಿಲ್ಲೆಯಲ್ಲಿ ಜೀವರಕ್ಷಕ ಆಸ್ಪತ್ರೆಗಳು ಬೇಕು ಎಂಬ ಚಳವಳಿ ಆರಂಭವಾಗಿದೆ. ಏಳು ಸಾವಿರಕ್ಕೂ ಹೆಚ್ಚು ಗಣ್ಯರು, ಶ್ರೀಸಾಮಾನ್ಯರು, ರಾಜಕಾರಣಿಗಳು ಧ್ವನಿಗೂಡಿಸಿದ್ದಾರೆ. ಮುಖ್ಯಮಂತ್ರಿಗಳು ವರದಿ ತರಿಸಿಕೊಂಡು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಕೆಲವು ರಾಜಕಾರಣಿಗಳು ನಾವು ಈಗಾಗಲೇ ಪತ್ರ ಬರೆದಿರುವುದಾಗಿ ಹೇಳಿಕೊಂಡಿದ್ದಾರೆ !

ತಲೆಗೆ ಗಂಭೀರ ಗಾಯಗಳಾದರೆ, ಹೃದಯಕ್ಕೆ ಪೆಟ್ಟಾದರೆ ಅಥವಾ ಗಂಭೀರ ಹೃದಯಾಘಾತವಾದರೆ, ಜೀರ್ಣಾಂಗಕ್ಕೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾದರೆ, ಹೆರಿಗೆ ಸಮಯದಲ್ಲಿ ಸಮಸ್ಯೆ ಉಂಟಾದರೆ ಅರ್ಧ ಗಂಟೆಯಿಂದ ಎರಡು ತಾಸಿನೊಳಗೆ ತುರ್ತು ಚಿಕಿತ್ಸೆ ನೀಡಿದರೆ ವ್ಯಕ್ತಿ ಬದುಕಿಕೊಳ್ಳುತ್ತಾನೆ. ಇದನ್ನು ವೈದ್ಯರು ಗೋಲ್ಡನ್‌ ಪೀರಿಯಡ್‌ ಅನ್ನುತ್ತಾರೆ. ಇಂತಹ ಚಿಕಿತ್ಸೆಗೆ ಜಿಲ್ಲೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಇದರ ಹೊರತಾಗಿ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆ ಮತ್ತು ತಾಲೂಕಿಗೆ ಒಂದೆರಡರಂತೆ ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಇದೆ. ಆದ್ದರಿಂದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಮೇಲೆ ಹೇಳಿದಂತಹ ಗಂಭೀರತೆ ಇದ್ದರೆ ಅನಿವಾರ್ಯವಾಗಿ ನೆರೆಯ ಜಿಲ್ಲೆಗೆ ರೋಗಿಗಳನ್ನು ಕಳಿಸಿಕೊಡುತ್ತಾರೆ. ಕೆಲವೊಮ್ಮೆ ಹಾದಿಯಲ್ಲಿ ಜೀವ ಹೋಗುತ್ತದೆ. ಸುಸಜ್ಜಿತ ಆಸ್ಪತ್ರೆಗೆ ತಲುಪಿದರೆ ಜೀವ ಉಳಿಯುತ್ತದೆ....

ಫೋಟೋ - http://v.duta.us/zKZ39AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/4CJ78AAA

📲 Get Uttara Kannada News on Whatsapp 💬