ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭ

  |   Udupinews

ಹೆಬ್ರಿ: 1882ರಲ್ಲಿ ಆರಂಭ ಗೊಂಡ ಹೆಬ್ರಿಯ ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಗೊಂಡಿದೆ.

ಆರಂಭದ ಶೈಕ್ಷಣಿಕ ವರ್ಷಗಳಲ್ಲಿ ಸುಮಾರು 800ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಲಿತಂತಹ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ 350 ವಿದ್ಯಾರ್ಥಿಗಳು ಕಲಿಯುತ್ತಿದ್ದು ಈ ಬಾರಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಗೊಂಡ ಪರಿಣಾಮವಾಗಿ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಖಾಸಗಿಯಾಗಿ ಎಲ್‌ಕೆಜಿ, ಯುಕೆಜಿ ಆರಂಭಿಸಿದ್ದು ಸರಕಾರದ ಅನುದಾನದಿಂದ ಆರಂಭವಾದರೆ ಉತ್ತಮ ಎನ್ನುವುದು ಪೋಷಕರ ಅಭಿಪ್ರಾಯ.

ಕನ್ನಡ ಮಾಧ್ಯಮಕ್ಕಿಲ್ಲ ವಿದ್ಯಾರ್ಥಿಗಳು!

ಆಂಗ್ಲ ಮಾಧ್ಯಮ ಆರಂಭಗೊಂಡ ಪರಿಣಾಮವಾಗಿ ಸರಕಾರಿ ಪ್ರಾಥಮಿಕ ಶಾಲೆ ಯಲ್ಲಿ ಈ ಬಾರಿ ಒಂದನೇ ತರಗತಿಗೆ ಒಂದು ವಿದ್ಯಾರ್ಥಿಯೂ ಪ್ರವೇಶಾತಿ ಪಡೆಯದೇ ಇರುವುದು ಆಶ್ಚರ್ಯ ಮೂಡಿಸಿದೆ. 137 ವರ್ಷಗಳ ಇತಿಹಾಸವಿರುವ ಕನ್ನಡ ಶಾಲೆಯಲ್ಲಿ ಕನ್ನಡ ಮಾಧ್ಯಮ ಮುಂದುವರಿಯಬೇಕು ಎನ್ನುವುದು ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳ ಅಭಿಪ್ರಾಯ. ಕನ್ನಡ ಮಾಧ್ಯಮಕ್ಕೂ ವಿದ್ಯಾರ್ಥಿಗಳನ್ನು ಸೇರಿಸುವಲ್ಲಿ ಹೆತ್ತವರು ಹಾಗೂ ಶಾಲೆ ಪ್ರಯತ್ನಿಸಬೇಕು ಎನ್ನುವುದು ಸ್ಥಳೀಯರ ಅನಿಸಿಕೆ.

ಅಂಗನವಾಡಿಗೆ ವಿದ್ಯಾರ್ಥಿಗಳು ಕಡಿಮೆ...

ಫೋಟೋ - http://v.duta.us/MZXpRAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/K1L57wAA

📲 Get Udupi News on Whatsapp 💬