ಕೆಎಸ್‌ಎನ್‌ ಕವಿತೆ ಅರಿತರೆ ವಿಚ್ಛೇದನಕ್ಕೆ ತಡೆ

  |   Mysorenews

ಮೈಸೂರು: ಮನುಷ್ಯನಲ್ಲಿರುವ ಅಂಧಕಾರವನ್ನು ಅಳಿಸಿ, ಬೆಳಕು ಮೂಡಿಸುವಲ್ಲಿ ಕವಿಗಳು ನಿರಂತರವಾಗಿ ಪ್ರಯತ್ನಿಸಿದ್ದು, ಅವರಲ್ಲಿ ಕೆ.ಎಸ್‌. ನರಸಿಂಹಸ್ವಾಮಿ ಮೊದಲಿಗರು ಎಂದು ಕವಯತ್ರಿ ಡಾ.ಲತಾ ರಾಜಶೇಖರ್‌ ಬಣ್ಣಿಸಿದರು.

ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ರಾಜ್ಯಮಟ್ಟದ ಸಾಹಿತ್ಯಾತ್ಮಕ, ಜಾನಪದ ಹಾಗೂ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯಲ್ಲಿನ ರೋಟರಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೇಮಕವಿ ಕವಿ ಕೆ.ಎಸ್‌. ನರಸಿಂಹಸ್ವಾಮಿ ಸ್ಮರಣಾರ್ಥ ಸಾಹಿತ್ಯೋತ್ಸವ, ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ, ಕವಿಗೋಷ್ಠಿ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಕವಿ: ಕೆಎಸ್‌ಎನ್‌ ನವೋದಯ ಕಾಲದ ಮಹಾಕವಿಯಾಗಿದ್ದು, ಅವರು ಜನಮುಖೀ, ಸಮಾಜಮುಖೀ ಕೃತಿಗಳನ್ನು ರಚಿಸಿದ್ದಾರೆ. ಇವರ ಕವಿತೆಗಳಲ್ಲಿ ಹೆಚ್ಚು ಪ್ರೇಮ ಭಾವನೆಗಳು ತುಂಬಿರುತ್ತಿದ್ದರಿಂದ ಪ್ರೇಮಕವಿ ಎಂದು ಗುರುತಿಸಲಾಯಿತು ಎಂದರು.

ವ್ಯಂಗ್ಯ ಚಿತ್ರಕಾರರು ಗಂಡ-ಹೆಂಡತಿ ಚಿತ್ರಗಳನ್ನು ಬಿಡಿಸುವಾಗ, ಹೆಂಡತಿಯ ಚಿತ್ರವನ್ನು ರೌದ್ರ ರೂಪದಲ್ಲಿ, ಲಟ್ಟಣಿಗೆ ಹಿಡಿದು ಗಂಡನಿಗೆ ಹೊಡೆಯುವಂತೆ ಮತ್ತು ಗಂಡನನ್ನು ಎದುರಿಸುವ ರೀತಿಯಲ್ಲೇ ಚಿತ್ರಿಸುತ್ತಾರೆ. ಆದರೆ, ಕೆ.ಎಸ್‌. ನರಸಿಂಹಸ್ವಾಮಿ ಅವರು ಮದುವೆಯಾದ ನಂತರವೂ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನೂ ಒಬ್ಬ ಸಿಪಾಯಿ’ ಎಂದು ಸತಿಯ ಮೇಲಿನ ಪ್ರೇಮವನ್ನು ಹೇಳಿಕೊಂಡಿದ್ದಾರೆ....

ಫೋಟೋ - http://v.duta.us/fXSOjAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/QVCMywAA

📲 Get Mysore News on Whatsapp 💬