ಕಲಬುರಗಿಯಲ್ಲಿ ಹರಿಯಲಿದೆ ಅಮೃತ ಧಾರೆ

  |   Kalburaginews

ಕಲಬುರಗಿ: ಅತ್ಯಂತ ವಿಶಾಲ ಮತ್ತು ಶಾಂತವಾದ ಕಲಬುರಗಿ ಅಮೃತ ಸರೋವರದಲ್ಲಿ ಸದಾ ಅಮೃತ ಧಾರೆ ಹರಿಯಲಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಥೆ, ಶತಾಯುಷಿ ರಾಜಯೋಗಿನಿ ದಾದಿ ಜಾನಕಿ ತಿಳಿಸಿದರು.

ನಗರ ಹೊರವಲಯದ ಗೀತಾ ನಗರದಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸುವರ್ಣ ಮಹೋತ್ಸವ, ಅಮೃತ ಸರೋವರ ರಿಟ್ರೀಟ್ ಸೆಂಟರ್‌ ಹಾಗೂ ಸಭಾಂಗಣವನ್ನು ರವಿವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಅಮೃತ ಸರೋವರದ ಸಭಾಂಗಣ ಅತ್ಯಂತ ಸುಂದರವಾಗಿದೆ. ಇದನ್ನು ಕಂಡು ನಾನು ಆಶ್ಚರ್ಯಚಕಿತಳಾಗಿದ್ದೇನೆ. ಇಂತಹ ಸಭಾಂಗಣ ಅಮೆರಿಕಾ, ಲಂಡನ್‌ನಲ್ಲೂ ನಾನು ನೋಡಿಲ್ಲ. ಶುಭ ಭಾವನೆಯಿಂದ ಎಲ್ಲರೂ ಚಿಂತನೆಯಲ್ಲಿ ತೊಡಗಿದರೆ ಇಲ್ಲಿ ಅಮೃತ ಧಾರೆ ಹರಿಯುತ್ತಲೇ ಇರುತ್ತದೆ ಎಂದರು.

ಮನುಷ್ಯನಿಗೆ ಶಾಂತಿ, ಪ್ರೇಮ, ಖುಷಿ ಬಹಳ ಮುಖ್ಯವಾಗಿ ಬೇಕು. ನಮ್ಮ ಐದು ಬೆರಳು ಸಮನಾಗಿಲ್ಲ. ಅದರಂತೆ ಎಲ್ಲರೂ ಸಮನಾಗಿರಲು ಸಾಧ್ಯವಿಲ್ಲ. ಯಾವುದಕ್ಕೂ ಭಯ ಪಡದೆ ಭಗವಂತನ ಮೇಲೆ ಶ್ರದ್ಧೆ ಇಟ್ಟು ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡರೆ ಹರ್ಷ, ಸಂತೋಷದಿಂದ ಇರಲು ಸಾಧ್ಯ ಎಂದರು.

ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಮಾತನಾಡಿ, ವಿಶ್ವದ ಶಾಂತಿ ಮತ್ತು ಏಳ್ಗೆಗೆ ರಾಜಯೋಗಿನಿ ದಾದಿ ಜಾನಕಿ ಶ್ರಮಿಸುತ್ತಿದ್ದಾರೆ. ಪರಮಾತ್ಮನ ಸಂದೇಶ ತಲುಪಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ತಮ್ಮ 16ನೇ ವಯಸ್ಸಿನಿಂದಲೇ ಇಂತಹ ಕಾರ್ಯದಲ್ಲಿ ತೊಡಗಿರುವ ಅವರು 103 ವರ್ಷವಾದರೂ ವಿಶ್ರಾಂತಿ ಬಯಸದೇ ಇರುವುದು ನಮಗೆಲ್ಲ ಮಾದರಿ ಎಂದು ಹೇಳಿದರು...

ಫೋಟೋ - http://v.duta.us/gREznAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/cibhVAAA

📲 Get Kalburagi News on Whatsapp 💬