ಜಿಎಸ್‌ಟಿ ಪದ್ಧತಿ ಅನುಸರಣಿಯಿಂದ ನಿಚ್ಚಳಗೊಳ್ಳಲಿ

  |   Chikkamagalurunews

ಚಿಕ್ಕಮಗಳೂರು: ಜಿಎಸ್‌ಟಿ ಪದ್ಧತಿ ಅನುಸರಣಿಯಿಂದ ನಿಚ್ಚಳಗೊಳ್ಳಬೇಕಿದೆ ಎಂದು ತೆರಿಗೆತಜ್ಞ ಬೆಂಗಳೂರಿನ ಲೆಕ್ಕಪರಿಶೋಧಕ ಗೆಲ್ಲಾ ಪ್ರವೀಣಕುಮಾರ್‌ ಅಭಿಪ್ರಾಯಿಸಿದರು.

ಜಿಲ್ಲಾ ತೆರಿಗೆ ಸಲಹೆಗಾರರ ಸಂಸ್ಥೆ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಜಿಎಸ್‌ಟಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸರ್ಕಾರಗಳಿಗೆ ಪ್ರಮುಖ ಆದಾಯ ತೆರಿಗೆ ಪಾವತಿ ಆಗಿರುತ್ತದೆ. ಹಿಂದಿನಿಂದಲೂ ತೆರಿಗೆ ಪಾವತಿಸಲು ಅನೇಕ ಪದ್ಧತಿಗಳನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ವಾಣಿಜ್ಯ ತೆರಿಗೆಪದ್ಧತಿ ಬಹಳವರ್ಷ ಜಾರಿಯಲ್ಲಿದ್ದು ನಂತರ ಮೌಲ್ಯವರ್ಧಿತ ತೆರಿಗೆ ಪದ್ಧತಿ ಕೆಲವರ್ಷಗಳು ಜಾರಿಯಲ್ಲಿತ್ತು. 2017ರ ಜುಲೈನಿಂದ ಏಕರೂಪ ತೆರಿಗೆ ಪದ್ಧತಿ ಜಿಎಸ್‌ಟಿ ಜಾರಿಯಲ್ಲಿದೆ ಎಂದರು.

ನೊಂದಾಯಿತ ವ್ಯಕ್ತಿಗಳು ಹಾಗೂ ಸಂಸ್ಥೆಗಳು ತೆರಿಗೆ ಪಾವತಿಸಲು ನೂತನ ಪದ್ಧತಿಯಲ್ಲಿ ಅನೇಕ ಗೊಂದಲ, ಅನುಮಾನ, ಸಮಸ್ಯೆಗಳು ಸಹಜವಾಗಿ ಗೋಜಲು ಮಾಡಿದೆ. ಕಾಲಕಾಲಕ್ಕೆ ಸರ್ಕಾರ ತೆರಿಗೆ ಇಲಾಖೆಯ ಮೂಲಕ ನಿರ್ದೇಶನಗಳನ್ನು ನೀಡುತ್ತ ಗೊಂದಲಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದರು.

2017-18ನೇ ಸಾಲಿನ ಜಿಎಸ್‌ಟಿ ವಾರ್ಷಿಕ ವರದಿಯನ್ನು ಜೂನ್‌ ಅಂತ್ಯದೊಳಗೆ ಸಲ್ಲಿಸುವುದು ಕಡ್ಡಾಯವಾಗಿದೆ. ವಿಶೇಷವಾಗಿ ನಮೂನೆ-9, 9ಎ ಮತ್ತು 9ಸಿ ಭರ್ತಿ ಮಾಡುವ ಬಗ್ಗೆ ಅನೇಕ ಅನುಮಾನಗಳು ತೆರಿಗೆ ಸಲಹೆಗಾರರನ್ನು ಕಾಡುತ್ತಿದೆ. ಐದಾರು ಅಂಶಗಳ ವಿವರಣೆಯನ್ನು ಕೆಲದಿನಗಳ ಹಿಂದಷ್ಟೇ ಇಲಾಖೆ ನೀಡಿದೆ. ಯಾವುದೇ ವ್ಯವಸ್ಥೆ ಆರಂಭದ ದಿನಗಳಲ್ಲಿ ಸ್ವಲ್ಪಮಟ್ಟಿನ ವಿವಾದಗಳಿಂದ ಕೂಡಿರುವುದು ಸಹಜ. ಅನುಸರಣಿಯಿಂದ ಕಾಲಕ್ರಮೇಣ ಅವುಗಳಿಗೆಲ್ಲ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು....

ಫೋಟೋ - http://v.duta.us/Z6BS6QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/5FsB5AAA

📲 Get Chikkamagaluru News on Whatsapp 💬