ಜನರನ್ನು ಕೈ ಬೀಸಿ ಕರೆಯುತ್ತಿದೆ ಸಸ್ಯ ಸಂತೆ

  |   Belgaumnews

ಬೆಳಗಾವಿ: ಬೇಸಿಗೆ ಮುಗಿದು ಮಳೆಗಾಲಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಸಸ್ಯಗಳಿಗೆ ಭಾರೀ ಬೇಡಿಕೆ. 21 ದಿನಗಳ ಕಾಲ ನಗರದ ಹ್ಯೂಂ ಪಾರ್ಕ್‌ನಲ್ಲಿ ನಡೆಯಲಿರುವ ಸಸ್ಯ ಸಂತೆಗೆ ರವಿವಾರ ಚಾಲನೆ ಸಿಕ್ಕಿದ್ದು, ವಿವಿಧ ಸಸ್ಯಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.

ತೋಟಗಾರಿಕೆ ಇಲಾಖೆ ಹಾಗೂ ಜಿಪಂ ವತಿಯಿಂದ ರವಿವಾರದಿಂದ ಆರಂಭಗೊಂಡಿರುವ ಸಸ್ಯ ಸಂತೆ ಹಾಗೂ ತೋಟಗಾರಿಕಾ ಅಭಿಯಾನ ಜೂ. 30ರ ವರೆಗೆ ನಡೆಯಲಿದೆ. ವಿವಿಧ ಬಗೆಯ ಸಸ್ಯಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಮೊದಲ ದಿನ ಅಷ್ಟೊಂದು ಬೇಡಿಕೆ ಇರದಿದ್ದರೂ ಮಳೆಗಾಲ ಆರಂಬವಾಗುತ್ತಿದ್ದಂತೆ ಈ ಸಸ್ಯಗಳಿಗೆ ಬೇಡಿಕೆ ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ.

ಜಿಲ್ಲೆಯ 28 ತೋಟಗಾರಿಕಾ ಕ್ಷೇತ್ರಗಳಲ್ಲಿ ಸುಮಾರು 3.73 ಲಕ್ಷಕ್ಕೂ ಹೆಚ್ಚು ಸಸ್ಯಗಳು ಇಲ್ಲಿ ಸಿದ್ಧಗೊಂಡಿವೆ. ಸದ್ಯ 8 ಸಾವಿರಕ್ಕೂ ಹೆಚ್ಚು ಸಸ್ಯಗಳನ್ನು ಹ್ಯೂಂ ಪಾರ್ಕ್‌ನಲ್ಲಿ ಇಡಲಾಗಿದೆ. ಮಾವು, ತೆಂಗು, ಪಾಮ್‌, ಕರಿ ಬೇವು, ಮೆಣಸಿನಕಾಯಿ, ಬದನೆಕಾಯಿ, ನೇರಳೆ, ನಿಂಬೆ , ಹುಣಸೆ, ಸೀತಾಫಲ ಸೇರಿದಂತೆ ವಿವಿಧ ಬಗೆಯ ಸಸ್ಯಗಳು ಇಲ್ಲಿ ಲಭ್ಯ ಇವೆ ಎಂದು ಜಿಲ್ಲಾ ಪಂಚಾಯತ್‌ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ ಮಾಹಿತಿ ನೀಡಿದರು....

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/4zkyVQAA

📲 Get Belgaum News on Whatsapp 💬