ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಆನ್‌ಲೈನ್‌ ವಂಚನೆ ಪ್ರಕರಣ

  |   Davanagerenews

ವಿಜಯ್‌ ಸಿ. ಕೆಂಗಲಹಳ್ಳಿ

ದಾವಣಗೆರೆ: ಬ್ಯಾಂಕ್‌ ಅಧಿಕಾರಿಗಳ ಸೋಗು…, ಸಾಲಕೊಡುವ ನೆಪ…, ವಿದೇಶಿ ಕಂಪನಿ ಹೆಸರು…, ಲಾಟರಿಯಲ್ಲಿ ಬಹುಮಾನ… ಹೀಗೆ ನಾನಾ ವಿಧದ ರೀತಿಯಲ್ಲಿ ಅಪರಿಚಿತ ವ್ಯಕ್ತಿಗಳು ಮೊಬೈಲ್ ಕರೆ ಮಾಡಿ ಜನರಿಂದ ಎಟಿಎಂ, ಡೆಬಿಟ್, ಕ್ರೆಡಿಟ್ಕಾರ್ಡ್‌ ಮಾಹಿತಿ ಪಡೆದು ಕ್ಷಣಾರ್ಧದಲ್ಲೇ ಲಕ್ಷಾಂತರ ರೂಪಾಯಿ ವಂಚಿಸುವ ಪ್ರಕರಣ ಈಚೆಗೆ ಸಾಮಾನ್ಯ ಎನ್ನುವಂತಾಗುತ್ತಿವೆ!.

ಹೌದು ಇತ್ತೀಚೆಗೆ ಎಟಿಎಂ, ಡೆಬಿಟ್, ಕ್ರೆಡಿಟ್ ಕಾರ್ಡ್‌ನ ಮಾಹಿತಿ ನೀಡಿ ಹಣ ಕಳೆದುಕೊಳ್ಳುತ್ತಿರುವ ಪ್ರಕರಣ ಜಾಸ್ತಿ ಆಗುತ್ತಿವೆ. ಅಕ್ಷರಸ್ಥರು, ಅನಕ್ಷರಸ್ಥರು ಎನ್ನದೆ ಎಲ್ಲರೂ ನಯವಾದ ಮಾತುಗಳ ಜಾಲಕ್ಕೆ ಸಿಲುಕಿ ಬಹು ಸುಲಭವಾಗಿ ವಂಚನೆಗೆ ತುತ್ತಾಗುತ್ತಿದ್ದಾರೆ.

ವಂಚನೆಗೆ ಒಳಗಾಗುವರು ಇರುವವರೆಗೆ ವಂಚನೆ ಮಾಡುವರು ಇರುತ್ತಾರೆ… ಎಂಬ ಮಾತಿನಂತೆಯೋ ಏನೋ ಪ್ರತಿ ನಿತ್ಯ ವಂಚನೆ ಪ್ರಕರಣಗಳ ವರದಿಯಾಗುತ್ತಿದ್ದರೂ ಎಟಿಎಂ, ಡೆಬಿಟ್ ಕಾರ್ಡ್‌ ಮಾಹಿತಿ ನೀಡಿ, ಹಣ ಕಳೆದುಕೊಂಡ ನಂತರ ಪರಿತಪಿಸುವುದು ಕಂಡು ಬರುತ್ತಿದೆ.

ತಂತ್ರಜ್ಞಾನದ ದಿನಗಳಲ್ಲಿ ಎಲ್ಲಾ ಸೇವಾ ವಲಯ ಕ್ಷೇತ್ರಗಳು ಡಿಜಿಟಿಲಿಕರಣವಾಗುತ್ತಿವೆ. ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಮಾನ್ಯತೆ ದೊರೆಯುತ್ತಿದೆ. ಅದರಲ್ಲೂ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ ಸೇರಿದಂತೆ ಆನ್‌ಲೈನ್‌ ನಗದು ರಹಿತ ವ್ಯವಹಾರದ ವೇಗ ಹೆಚ್ಚುತ್ತಿದ್ದು, ಅಷ್ಟೇ ವೇಗದಲ್ಲಿ ಜನಸಾಮಾನ್ಯರು, ಅಮಾಯಕರು ವಂಚನೆಗೊಳಗಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ....

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/sixLtQAA

📲 Get Davanagere News on Whatsapp 💬