ಡಿ. 26ರಂದು ಮತ್ತೆ ಕಂಕಣ ಸೂರ್ಯಗ್ರಹಣ

  |   Uttara-Kannadanews

ಅಂಕೋಲಾ: 40 ವರ್ಷಗಳ ಬಳಿಕ ಮತ್ತೂಮ್ಮೆ ಡಿ.26 ರಂದು ಗೋಚರಿಸಲಿರುವ ಖಗ್ರಾಸ ಸೂರ್ಯಗ್ರಹಣ ವೀಕ್ಷಿಸಲು ಅಂಕೋಲಾದಲ್ಲಿ ಖಗೋಳ ತಜ್ಞರು ವಿಶೇಷ ಸಿದ್ಧತೆ ನಡೆಸಿದ್ದಾರೆ.

1980 ಫೆಬ್ರುವರಿಯಲ್ಲಿ ಸಂಭವಿಸಿದ ಸೌರಮಂಡಲದ ಚಮತ್ಕಾರಗಳಲ್ಲಿ ಒಂದಾದ ಪೂರ್ಣ ಸೂರ್ಯಗ್ರಹಣ ಈ ವರ್ಷ ಡಿ.26 ರಂದು ಮತ್ತೆ ಕಾಣಿಸಿಕೊಳ್ಳಲಿದೆ. ಅಂದು ಘಟಿಸಿದ ಈ ಸೂರ್ಯ ಗ್ರಹಣ ಭಾರತದ ಅಂಕೋಲಾದಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಮತ್ತು ವಿಶೇಷವಾಗಿ ಕಾಣಿಸಿದ ಬಗ್ಗೆ ಖಗೋಳ ತಜ್ಞರು ಮಾಹಿತಿ ನೀಡಿದ್ದಾರೆ.

1980 ಫೆ.16 ಶಿವರಾತ್ರಿ ಅಮಾವಾಸ್ಯೆಯ ದಿನ. ಪ್ರಪಂಚದ ಖಗೋಳ ಇತಿಹಾಸದಲ್ಲಿ ಅಂಕೋಲಾ ಊರಿಗೆ ಐತಿಹಾಸಿಕ ಮಹತ್ವ ದೊರೆತಿತ್ತು. ಆ ದಿನ ಅತ್ಯಂತ ವಿರಳಾತಿ ವಿರಳ, ಬಹುಶಃ ಅದೇ ಸ್ಥಳದಲ್ಲಿ ಸಾವಿರಾರು ವರ್ಷಗಳಿಗೊಮ್ಮೆ ನಡೆಯಬಹುದಾದ ಕೌತುಕಪೂರ್ಣ ಖಗೋಳ ವಿದ್ಯಾಮಾನವೊಂದು ನಡೆದು ಹೋಯಿತು. ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಸೂರ್ಯನಿಗೆ ಚಂದ್ರಬಿಂಬ ಅಡ್ಡ ಹಾಯ್ದ ಪರಿಣಾಮ ನಡು ಹಗಲಿನಲ್ಲಿಯೇ ನಕ್ಷತ್ರ ಕಾಣುವಂತೆ ನಡುರಾತ್ರಿಯ ಅನುಭವ ಸ್ಥಳೀಯರಿಗಾಯಿತು. ವಜ್ರದ ಉಂಗುರದಂತೆ ಸೂರ್ಯ ಕೆಲ ಕಾಲ ರಂಜಿಸಿದ. ಮುನ್ನೆಚ್ಚರಿಕೆ ಯಿಲ್ಲದೇ ಸೌರಗಾಜು, ಬೆಳಕು ನಿರೋಧಕ ಸಾಧನಗಳ ಸಹಾಯವಿಲ್ಲದೇ ತದೇಕದೃಷ್ಟಿಯಿಂದ ಸೂರ್ಯನನ್ನು ಗ್ರಹಣದ ಸಮಯದಲ್ಲೇ ಆಗಲಿ ಬೆಳಗು ಸಂಜೆಯಲ್ಲದೇ ಬೇರಾವುದೇ ಸಮಯದಲ್ಲಿ ನೋಡುವುದು ಕಣ್ಣಿಗೆ ಹಾನಿಯಾಗುತ್ತದೆ ಎಂಬುದನ್ನು ಬಿಟ್ಟರೆ ಇತರ ಯಾವುದೇ ತೊಂದರೆಗಳು ಗ್ರಹಣ ವೀಕ್ಷಣೆಯಿಂದ ಆಗುತ್ತದೆ ಎಂಬುದಕ್ಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ....

ಫೋಟೋ - http://v.duta.us/BTku0wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/-ui8MgAA

📲 Get Uttara Kannada News on Whatsapp 💬