ತೊಕ್ಕೊಟ್ಟು ಮೇಲ್ಸೇತುವೆ ಉದ್ಘಾಟನೆ ಮುಂದೂಡಿಕೆ?

  |   Dakshina-Kannadanews

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್‌ನ ಮೇಲ್ಸೇತುವೆ ಕಾಮಗಾರಿ ರವಿವಾರ ಪೂರ್ಣಗೊಂಡಿದೆ. ಜೂ. 10ಕ್ಕೆ ಉದ್ಘಾಟನೆಗೆ ನಿಗದಿಯಾಗಿದ್ದ ಮುಹೂರ್ತ ತಾಂತ್ರಿಕ ಕಾರಣಗಳಿಂದ ಮುಂದೂಡುವ ಸಾಧ್ಯತೆಯಿದ್ದು, ಜೂ. 14ರಂದು ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಸಭೆಯ ಬಳಿಕ ಉದ್ಘಾಟನೆಯ ದಿನಾಂಕ ನಿಗದಿಯಾಗಲಿದೆ.

ಎಂಟು ವರ್ಷಗಳ ಹಿಂದೆ ಆರಂಭಗೊಂಡಿದ್ದ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಆರ್ಥಿಕ ಅಡಚಣೆಯಿಂದ ಅಮೆಗತಿಯಲ್ಲಿತ್ತು. ಕಾಮಗಾರಿ ನಡೆ ಸುವ ಸಂಸ್ಥೆಗೆ ಸಂಸದರ ಶಿಫಾರಸ್ಸಿನ ಮೇರೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿದ್ದರು. ಈಗ ಕಾಮಗಾರಿ ಪೂರ್ಣ ಗೊಂಡಿದ್ದು ಉದ್ಘಾಟನೆಗೆ ದಿನಾಂಕ ನಿಗದಿಯಾಗಬೇಕಿದೆ.

ಕಾಮಗಾರಿ ಸಂಪೂರ್ಣ

ಮೂರು ತಿಂಗಳಲ್ಲಿ 24 ಗಂಟೆಗಳ ಕಾಲ ನಿರಂತರ ಕಾಮಗಾರಿ ನಡೆದಿದ್ದು, ಇನ್ನೊಂದೆಡೆ ಮಳೆ ಕಾಮಗಾರಿ ಅಡಚಣೆ ನೀಡದ ಕಾರಣ ಸದ್ಯ ಕಾಮಗಾರಿ ಪೂರ್ಣ ಗೊಂಡಿದೆ. ತಡೆಗೋಡೆಗೆ ಪೈಟಿಂಗ್‌ ಕಾರ್ಯ ಮತ್ತು ಹೆದ್ದಾರಿ ಮದ್ಯೆ ಎರಡು ವಾಹನಗಳು ಸಂಚರಿಸುವ ಮಧ್ಯೆ ಲೈನ್‌ ಹಾಕುವ ಕಾರ್ಯ ರವಿವಾರ ಸಂಜೆಗೆ ಪೂರ್ಣಗೊಳ್ಳಲಿದೆ. ಕಾಮಗಾರಿಗೆ ಬಳಸಿದ್ದ ಕಾಂಕ್ರೀಟ್ ಸಾಮಾಗ್ರಿಗಳ ತೆರವು ಕಾರ್ಯ ಸಂಜೆಯ ವೇಳೆಗೆ ಪೂರ್ಣಗೊಂಡಿದೆ. ಫಿನಿಶಿಂಗ್‌ ಕಾರ್ಯ ಮುಗಿದಿದೆ.

ಫೋಟೋ - http://v.duta.us/heEUCwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/rphk_QAA

📲 Get Dakshina Kannada News on Whatsapp 💬