ದೋಷ ಗ್ರಹಿಸುವ ಪ್ರವೃತ್ತಿ ಸಲ್ಲ: ಡಾ| ಹೆಗ್ಗಡೆ

  |   Udupinews

ಉಡುಪಿ: ಸಾಮಾನ್ಯವಾಗಿ ಜನರಲ್ಲಿ ಉತ್ತಮ ಗುಣಕ್ಕಿಂತ ದೋಷವನ್ನು ಗ್ರಹಿಸುವ ಶಕ್ತಿ ಹೆಚ್ಚಿರುತ್ತದೆ. ಆದರೆ ಹರಿಪ್ರಸಾದ ರೈ ಅವರ ವ್ಯಕ್ತಿತ್ವ ಭಿನ್ನವಾಗಿದೆ. ಅವರು ಇಲ್ಲಿಯವರೆಗೆ ಯಾರೊಬ್ಬರನ್ನೂ ಟೀಕೆ ಮಾಡಿದವರಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಶನಿವಾರ ಅಂಬಲಪಾಡಿಯ ಶ್ಯಾಮಿಲಿ ಸಭಾಭವನದಲ್ಲಿ ಆಯೋಜಿಸಿದ್ದ ಹರಿಪ್ರಸಾದ್‌ ರೈ ಬೆಳ್ಳಿಪಾಡಿ 70ರ ಸಂಭ್ರಮದಲ್ಲಿ ಮಾತನಾಡಿದರು.

ರೈ ತಮ್ಮ 70ರ ಸಂಭ್ರಮದಲ್ಲಿ ನಾಲ್ಕು ಮಠಾಧೀಶರನ್ನು ಒಂದೇ ವೇದಿಕೆಯಲ್ಲಿ ತಂದಿರುವುದು ಸಂತೋಷದ ವಿಷಯ. ರೈ ಅವರ ಮೇಲಿನ ಅಭಿಮಾನದಿಂದ ದೇಶ- ವಿದೇಶಗಳಿಂದ ಬಂದಿದ್ದಾರೆ. ಅವರಿಂದ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಇನ್ನೂ ಹೆಚ್ಚಿನ ಸೇವೆ ಸಿಗುವಂತಾಗಲಿ. ಶ್ರೀ ಕ್ಷೇತ್ರ ಧರ್ಮಸ್ಥಳದ ಕುಟುಂಬದಲ್ಲಿ ಅವರು ಒಬ್ಬರಾಗಿದ್ದಾರೆ ಎಂದರು.

ತಾನು ಯಾರೆಂಬುದು ಮನುಷ್ಯನ ಹುಟ್ಟಿ ನೊಂದಿಗೆ ನಿರ್ಧಾರವಾಗಿರುತ್ತದೆ. ಆದರೆ ತಾನು ಏನೆಂಬುದನ್ನು ಮಾತ್ರ ಬದುಕಿನಲ್ಲಿ ಗಳಿಸ ಬೇಕಾಗುತ್ತದೆ. ರೈ ಧಾರ್ಮಿಕ, ಸಾಮಾಜಿಕ ಕಾರ್ಯ ಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ತಾನು ಏನೆಂಬುದು ಬದುಕಿನಲ್ಲಿ ಕಂಡುಕೊಂಡಿದ್ದಾರೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಕ್ಷೇತ್ರದ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಹೇಳಿದರು....

ಫೋಟೋ - http://v.duta.us/qwd7LgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/W1a_agAA

📲 Get Udupi News on Whatsapp 💬