ನಗರದ ಸರಕಾರಿ ಕಚೇರಿಗಳಲ್ಲಿಯೇ ಇಲ್ಲ ಮಳೆಕೊಯ್ಲು!

  |   Dakshina-Kannadanews

ಮಹಾನಗರ: ನಗರದಲ್ಲಿ ನೀರಿನ ಸಮಸ್ಯೆಗೆ ಪರಿಹಾರೋಪಾಯವಾಗಿ ಮಳೆಕೊಯ್ಲು ವ್ಯವಸ್ಥೆ ಕಡ್ಡಾಯ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಮಾದರಿಯಾಗಬೇಕಾಗಿರುವ ಸರಕಾರಿ ಕಚೇರಿಗಳಲ್ಲೇ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿಲ್ಲ ಎನ್ನುವುದು ವಾಸ್ತವ!

ನಗರದಲ್ಲಿರುವ ಮೂರು ಸರಕಾರಿ ಕಚೇರಿ ಗಳನ್ನು ಹೊರತುಪಡಿಸಿದರೆ, ಉಳಿದಂತೆ ಯಾವುದೇ ಕಚೇರಿಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ ಎನ್ನುವುದು ಗೊತ್ತಾಗಿದೆ. ಅಂದರೆ, ಸರಕಾರಿ ವ್ಯವಸ್ಥೆಯಲ್ಲಿ ಇರುವ ಅಧಿಕಾರಿ ವರ್ಗದವರಿಗೇ ಮಳೆಕೊಯ್ಲು ಬಗ್ಗೆ ಅಷ್ಟೊಂದು ಬದ್ಧತೆ ಅಥವಾ ಇಚ್ಛಾಶಕ್ತಿ ಇಲ್ಲದಿರಬೇಕಾದರೆ, ಜನಸಾಮಾನ್ಯರನ್ನು ಆ ದಿಕ್ಕಿನಲ್ಲಿ ಎಷ್ಟರ ಮಟ್ಟಿಗೆ ಉತ್ತೇಜಿಸಲು ಸಾಧ್ಯ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವುದು ಸಹಜ.

ದ.ಕ. ಜಿಲ್ಲಾಧಿಕಾರಿ ಕಚೇರಿ, ದ.ಕ. ಜಿಲ್ಲಾ ಪಂಚಾಯತ್‌ ಮತ್ತು ಮಹಾನಗರ ಪಾಲಿ ಕೆಯ ಆವರಣದಲ್ಲಿ ಹಲವು ವರ್ಷಗಳ ಹಿಂದೆಯೇ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇಡೀ ಕಚೇರಿಗಳ ಅಗತ್ಯಕ್ಕೆ ಬೇಸಗೆಯಲ್ಲಿ ಈ ನೀರಿನ ಬಳಕೆ ಆಗುತ್ತದೆ. ಕೆಲವು ಇಲಾಖಾ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿರುವುದರಿಂದ ಅಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲು ಸಾಧ್ಯ ವಾಗಿಲ್ಲ ಎಂದು ಅಧಿಕಾರಿಗಳು ಹೇಳು ತ್ತಾರೆ. ಆದರೆ ಸ್ವಂತ ಕಟ್ಟಡಗಳಲ್ಲಿ ಯಾಕೆ ಅಳವಡಿಸಲಾಗಿಲ್ಲ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿಯೂ ಸರಿಯಾದ ಉತ್ತರವಿಲ್ಲ....

ಫೋಟೋ - http://v.duta.us/GQq5XQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/rdk1ZAAA

📲 Get Dakshina Kannada News on Whatsapp 💬