ನೀರಿನ ಸಮಸ್ಯೆ ನಿವಾರಣೆಯಲ್ಲಿ ನಿರ್ಲಕ್ಷ್ಯ

  |   Kolar-Karnatakanews

ಕೋಲಾರ: ನೀರಿನ ಸಮಸ್ಯೆ ನಿವಾರಿಸುವಲ್ಲಿ ನಗರಸಭೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಜಯನಗರದ 14ನೇ ವಾರ್ಡ್‌ನ ನಾಗರಿಕರು ಬುಧವಾರ ಬೆಳಗ್ಗೆ 10 ಗಂಟೆಗೆ ಟೇಕಲ್ ರಸ್ತೆಯ ಸಫಲಮ್ಮ ದೇಗುಲದ ಮುಂದೆ ರಸ್ತೆ ತಡೆ ನಡೆಸಲು ತೀರ್ಮಾನ ಕೈಗೊಂಡರು.

ಸಫಲಮ್ಮ ದೇವಾಲಯದ ಆವರಣದಲ್ಲಿ ಭಾನುವಾರ ಬೆಳಗ್ಗೆ ಕರೆಯಲಾಗಿದ್ದ ಈ ಭಾಗದ ನಾಗರಿಕರ ಸಭೆಯಲ್ಲಿ ಹೋರಾಟ ನಡೆಸಲು ಒಮ್ಮತದ ನಿರ್ಣಯ ಅಂಗೀಕರಿಸಲಾಯಿತು.

ನಾಗರಿಕ ಸಮಿತಿ ಅಧ್ಯಕ್ಷ ಎನ್‌.ಗೋವಿಂದಪ್ಪ, ಕಾರ್ಯದರ್ಶಿ ಪ್ರಮೋದ್‌ಕುಮಾರ್‌ ಮಾತನಾಡಿ, ಈ ಭಾಗದ ಜನತೆ ಸತತ ಆರು ತಿಂಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ, ಕೊಳಾಯಿಗಳ ಮೂಲಕ ನೀರು ಬರೋದಿಲ್ಲ, ಟ್ಯಾಂಕರ್‌ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಈಗಾಗಲೇ ನಾಲ್ಕಾರು ಬಾರಿ ನಗರಸಭೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ಪಂಪ್‌ಸೆಟ್ ನೀಡದೇ ನಿರ್ಲಕ್ಷ್ಯ: ನಿಕಟಪೂರ್ವ ನಗರಸಭಾ ಸದಸ್ಯ ಎಸ್‌.ಆರ್‌.ಮುರಳಿಗೌಡ, ನಮ್ಮ ವಾರ್ಡ್‌ಗೆ ನೀರು ಪೂರೈಕೆ ಮಾಡುವ ಕೊಳವೆ ಬಾವಿಗಳ ಪಂಪ್‌ ಮೋಟಾರ್‌ ಕೆಟ್ಟಿದ್ದರೂ ಸರಿಪಡಿಸದೇ ನಿರ್ಲಕ್ಷ್ಯ ತೋರಿದ್ದಾರೆ. ತಮ್ಮ ಅಧಿಕಾರ ಹೋಗಿ ಆಡಳಿತಾಧಿಕಾರಿ ನೇಮಕವಾದ ನಂತರ ನಮ್ಮ ಮಾತನ್ನು ಕೇಳುತ್ತಿಲ್ಲ ಎಂದರು....

ಫೋಟೋ - http://v.duta.us/N9wl2QEA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/L5fDvQAA

📲 Get Kolar Karnataka News on Whatsapp 💬