ಪಾಲಿಕೆ ಆಡಳಿತ ನಿಷ್ಕ್ರಿಯ: ಶೆಟ್ಟರ ಆರೋಪ

  |   Dharwadnews

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಆಡಳಿತ 2-3 ತಿಂಗಳಿನಿಂದ ನಿಷ್ಕ್ರಿಯವಾಗಿದ್ದು, ಪಾಲಿಕೆ ಆಯುಕ್ತರ ಸಹಿ ಆಗದೆ ಶಾಸಕರ, ಸಂಸದರ ಅನುದಾನದ 54 ಕಾಮಗಾರಿಗಳ ಫೈಲ್ಗಳು ಬಾಕಿ ಉಳಿದಿವೆ. ಹೀಗಾಗಿ ಅವಳಿ ನಗರದಲ್ಲಿ ರಸ್ತೆ, ಬೀದಿ ದೀಪ ಸೇರಿದಂತೆ ಯಾವುದೇ ಕಾಮಗಾರಿಗಳು ಆಗುತ್ತಿಲ್ಲವೆಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬೇಸರ ವ್ಯಕ್ತಪಡಿಸಿದರು.

ಗೋಕುಲ ರಸ್ತೆ ಜಯಪ್ರಕಾಶ ನಗರದ ರಂಗಮಂದಿರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ ಉತ್ತಮ ಕೆಲಸಗಳು ಆಗಲು ಸ್ಥಳೀಯ ಸಂಸ್ಥೆಯ ಮುಖ್ಯಸ್ಥ ಉತ್ತಮವಾಗಿರಬೇಕು. ಆದರೆ ಈಗಿನ ಪಾಲಿಕೆ ಆಯುಕ್ತ ಪ್ರಶಾಂತಕುಮಾರ ಮಿಶ್ರಾ ಯಾವುದೇ ಕಾಮಗಾರಿಗಳ ಫೈಲ್ಗೆ ಸಹಿ ಮಾಡುತ್ತಿಲ್ಲ. ಯಾರಾದರೂ ಕೇಳಿದರೆ ನಾನು ಚುನಾವಣೆಗೆ ಮಾತ್ರ ಬಂದಿದ್ದೇನೆ. ಹೀಗಾಗಿ ಯಾವುದೇ ಫೈಲ್ಗೆ ಸಹಿ ಮಾಡಲ್ಲ, ಕೆಲಸ ಮಾಡಲ್ಲವೆಂದು ನಿಷ್ಕಾಳಜಿ ತೋರುತ್ತಿದ್ದಾರೆ. ಈಗ ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡಿದೆ. ಆದರೂ ಅವಳಿ ನಗರದಲ್ಲಿ ಸಣ್ಣ-ಪುಟ್ಟ ಕೆಲಸ ಸೇರಿದಂತೆ ಯಾವುದೇ ಕಾಮಗಾರಿಗಳು ಆಗುತ್ತಿಲ್ಲ ಎಂದರು.

ಬೀದಿದೀಪ, ರಸ್ತೆ, ಒಳಚರಂಡಿ ಸೇರಿದಂತೆ ತುರ್ತಾಗಿ ಅವಶ್ಯವಿರುವ ಕೆಲಸಗಳಿದ್ದರೆ ಗಮನಕ್ಕೆ ತಂದರೆ 14ನೇ ಹಣಕಾಸು ಯೋಜನೆಯಡಿ ತಕ್ಷಣ ಅವನ್ನು ಕೈಗೆತ್ತಿಕೊಳ್ಳಲಾಗುವುದು. ಈ ರೀತಿಯ ಜನಸ್ಪಂದನ ಸಭೆಗಳನ್ನು ವಾರ್ಡ್‌ವಾರು ನಡೆಸಿದರೆ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಳ್ಳಲು. ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು....

ಫೋಟೋ - http://v.duta.us/0FnHbAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/3QlwzgAA

📲 Get Dharwad News on Whatsapp 💬