ಬಾದಾಮಿ ಸರ್ಕಾರಿ ಪದವಿ ಕಾಲೇಜಿಗಿಲ್ಲ ಸ್ವಂತ ಕಟ್ಟಡ

  |   Bagalkotnews

ಬಾದಾಮಿ: 2007ರಲ್ಲಿ ಮಂಜೂರಾಗಿರುವ ಬಾದಾಮಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರಥಮ ದರ್ಜೆ ಪದವಿ ಕಾಲೇಜುಗಳಿಗೆ ಸ್ವಂತ ಕಟ್ಟಡವಿಲ್ಲ. ಪದವಿ ಕಾಲೇಜು ಪ್ರಾಥಮಿಕ ಶಾಲೆಯಲ್ಲಿ ಮತ್ತು ಪದವಿ ಪೂರ್ವ ಕಾಲೇಜು ತರಗತಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಪದವಿ ಪೂರ್ವ ಕಾಲೇಜು: ನಗರದ ಹೊರವಲಯದ ಸರ್ಕಾರಿ ಪ್ರೌಢಶಾಲೆಯಲ್ಲಿ ಎರಡು ಕೊಠಡಿ ಹೊಂದಿರುವ ಪದವಿ ಪೂರ್ವ ಕಾಲೇಜು 2007ರಲ್ಲಿ ಮಂಜೂರಾಗಿ ಕಾರ್ಯನಿರ್ವಹಿಸುತ್ತಿದೆ. ಸದರಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ದಾಖಲಾಗಿದ್ದು, ಅಗತ್ಯ ಕೊಠಡಿಗಳಿಲ್ಲದಿರುವುದರಿಂದ ಪಿಯು ಕಾಲೇಜು ವರ್ಗ ನಡೆಸುವುದು ತೊಂದರೆಯಾಗುತ್ತಿದೆ.

ಪದವಿ ಕಾಲೇಜು;ಸರ್ಕಾರಿ ಪದವಿ ಕಾಲೇಜು 2007ರಲ್ಲಿ ಮಂಜೂರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಹಿತ ಇದುವರೆಗೂ ಸ್ವಂತ ಕಟ್ಟಡ ಭಾಗ್ಯ ಒದಗಿಬಂದಿಲ್ಲ. ನ್ಯಾಕ್‌ ಮಾನ್ಯತೆಗೆ ಸ್ವಂತ ಕಟ್ಟಡ, ಮೈದಾನ, ಮೂಲಸೌಲಭ್ಯ, ಅಗತ್ಯ ಸಿಬ್ಬಂದಿ ಅಗತ್ಯ. ಆದರೆ ಈ ನಾಲ್ಕು ಅಂಶಗಳು ಇಲ್ಲಿನ ಸರಕಾರಿ ಕಾಲೇಜಿಗಿಲ್ಲ. ಪ್ರಸಕ್ತ ವರ್ಷ ಸುಮಾರು 485ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಪದವಿ ಕಾಲೇಜಿನ ತರಗತಿಗಳು ನಗರದ ಶಾಸಕರ ಮಾದರಿ ಶಾಲೆಯಲ್ಲಿ ತರಗತಿ ನಡೆಯುತ್ತಿದ್ದು, ಇದರಿಂದ ಪ್ರಾಥಮಿಕ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಪದವಿ ಕಾಲೇಜಿನಲ್ಲಿ 10 ಜನ ಕಾಯಂ ಮತ್ತು 20 ಜನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪದವಿ ಕಾಲೇಜು ವರ್ಗಗಳು ನಡೆಯುವುದರಿಂದ ಬೆಳಗ್ಗೆ ಪದವಿ ತರಗತಿ ಮತ್ತು ಮಧ್ಯಾಹ್ನ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವರ್ಗಗಳು ಪಾಳೆಯಾಧಾರದ ಮೇಲೆ ನಡೆಯುತ್ತಿವೆ. ಸ್ವಂತ ಕಟ್ಟಡ ಇಲ್ಲದೇ ಪದವಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ....

ಫೋಟೋ - http://v.duta.us/05WkagAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/IuPKCwAA

📲 Get Bagalkot News on Whatsapp 💬