ಬರ ಅಧ್ಯಯನಕ್ಕೆ ಬಂದ ಬಿಎಸ್‌ವೈಗೆ ಅದ್ಧೂರಿ ಸ್ವಾಗತ!

  |   Raichurnews

ಲಿಂಗಸುಗೂರು: ಬರ ಅಧ್ಯಯನ ಪ್ರವಾಸಕ್ಕೆ ಶನಿವಾರ ತಾಲೂಕಿಗೆ ಭೇಟಿ ನೀಡಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಇಲ್ಲಿನ ಬಿಜೆಪಿ ಮುಖಂಡರು ಅವರಿಗೆ ಅದ್ಧೂರಿ ಸ್ವಾಗತ ಕೋರಿದ್ದು ಚರ್ಚೆಗೆ ಗ್ರಾಸವಾಗಿದೆ.

ಕ್ಷೇತ್ರದಲ್ಲಿ ಭೀಕರ ಬರ ತಾಂಡವವಾಡುತ್ತಿದೆ. ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆಯಿಂದ ಜಾನುವಾರುಗಳನ್ನು ಕಸಾಯಿಖಾನೆಯತ್ತ ಮಾರಾಟ ಮಾಡುವ ಸ್ಥಿತಿ ತಲುಪಿದೆ. ಇದರ ವೀಕ್ಷಣೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಶನಿವಾರ ತಾಲೂಕಿನ ಮುದಗಲ್ ಹೋಬಳಿ ಛತ್ತರ ತಾಂಡಾದಲ್ಲಿ ಬರ ಪರಿಶೀಲನೆ ನಡೆಸಿ ಲಿಂಗಸುಗೂರಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಭರ್ಜರಿ ಸ್ವಾಗತ: ಬಿ.ಎಸ್‌.ಯಡಿಯೂರಪ್ಪ ಅವರು ತಾಲೂಕಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಬಿಜೆಪಿ ಮುಖಂಡರು ನೂರಾರು ಸಂಖ್ಯೆಯಲ್ಲಿ ಬ್ಯಾನರ್‌ ಹಾಗೂ ಕಟೌಟ್ ಹಾಕುವ ಮೂಲಕ ಭರ್ಜರಿ ಸ್ವಾಗತ ನೀಡಿದ್ದು ಎಲ್ಲಡೆ ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷ ನಾಯಕರು ಭೇಟಿ ನೀಡಿರುವುದು ಬರ ಪರಿಶೀಲನೆಗಾಗಿ. ಆದರೆ ಇಲ್ಲಿನ ನಾಯಕರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬ್ಯಾನರ್‌ಗಳನ್ನು ಹಾಕಿ ಸ್ವಾಗತ ಕೋರಿದ್ದು ಯಾವ ಪುರುಷಾರ್ಥಕ್ಕೆ ಎಂಬುದು ತಿಳಿಯದಾಗಿದೆ....

ಫೋಟೋ - http://v.duta.us/75ge4wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/g4-LHQAA

📲 Get Raichur News on Whatsapp 💬