ಬಾವಿಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು

  |   Chikkaballapuranews

ಚಿಕ್ಕಬಳ್ಳಾಪುರ: ಬಾವಿಯಲ್ಲಿ ಬಟ್ಟೆ ತೊಳೆಯುವಾಗ ಕಾಲು ಜಾರಿ ಬಿದ್ದ ತನ್ನ ಮಗಳನ್ನು ರಕ್ಷಿಸಲು ಹೋಗಿ ತಾಯಿ ಹಾಗೂ ಆಕೆಯ ಮಗ ಸೇರಿ ಮೂವರು ಬಾವಿಯೊಳಗೆ ಸಿಲುಕಿ ಹೊರ ಬರಲಾಗದೇ ನೀರಿನಲ್ಲಿ ಉಸಿರುಗಟ್ಟಿ ಮೃತ ಪಟ್ಟಿರುವ ಹೃದಯವಿದ್ರಾವಿಕ ಘಟನೆ ನಗರದ ಹೊರ ವಲಯದ ತಿಪ್ಪೇನಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ತಿಪ್ಪೇನಹಳ್ಳಿ ಗ್ರಾಮದ ವಿಜಯಾ (30), ಆಕೆಯ ಪುತ್ರ 10 ವರ್ಷದ ಅಜಯ್‌ ಹಾಗೂ 8 ಪುತ್ರಿ ಧನಲಕ್ಷ್ಮೀ ಮೃತರು.ಕಳೆದ 11 ವರ್ಷಗಳ ಹಿಂದೆ ವಿಜಯಾ ತಿಪ್ಪೇನಹಳ್ಳಿ ಗ್ರಾಮದ ನಾಗರಾಜ್‌ ಜೊತೆ ಮದುವೆಯಾಗಿ ಗ್ರಾಮದಲ್ಲಿ ನೆಲೆಸಿದ್ದರು.

ಘಟನೆ ವಿವರ: ಗಾರೆ ಕೆಲಸ ಮಾಡುವ ವಿಜಯಾ ಭಾನುವಾರ ರಜೆ ಇದ್ದ ಕಾರಣ ತನ್ನ ಗಂಡ ನಾಗರಾಜ್‌ಗೆ ಹೇಳಿ ತನ್ನ ಮಕ್ಕಳಾದ ಅಜಯ್‌ ಹಾಗೂ ಧನಲಕ್ಷ್ಮೀಯನ್ನು ಜೊತೆಯಲ್ಲಿ ಕರೆದುಕೊಂಡು ಗ್ರಾಮದ ಸಮೀಪವಿದ್ದ ಬಾವಿಯಲ್ಲಿ ಬಟ್ಟೆ ತೊಳೆಯಲಿಕ್ಕೆ ಹೋಗಿದ್ದು, ಈ ವೇಳೆ ಧನಲಕ್ಷ್ಮೀ ಅಕಸ್ಮಿಕವಾಗಿ ಕಾಲುಜಾರಿ ಬಾವಿಯೊಳಗೆ ಬಿದ್ದಿದ್ದಾಳೆ.

ಇದನ್ನು ನೋಡಿದ ತಾಯಿ ವಿಜಯಾ ಮಗಳನ್ನು ರಕ್ಷಿಸಲು ಬಾವಿಗೆ ಇಳಿದಿದ್ದಾಳೆ. ತಾಯಿ ಬಾವಿಗೆ ಇಳಿದಿದ್ದನ್ನು ನೋಡಿ ಮಗ ಅಜಯ್‌ ಕೂಡ ಬಾವಿಗೆ ಇಳಿದಿದ್ದಾನೆ. ಆದರೆ ಮೂವರು ಕೂಡ ಮತ್ತೆ ಬಾವಿಯಿಂದ ಹೊರ ಬರಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ....

ಫೋಟೋ - http://v.duta.us/VPwt9wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/vyVOAgAA

📲 Get Chikkaballapura News on Whatsapp 💬