ಮೌಲ್ಯಗಳಿಂದ ದೇಶದ ಪ್ರಗತಿ ಸಾಧ್ಯ

  |   Raichurnews

ರಾಯಚೂರು: ದೇಶ ಆರ್ಥಿಕವಾಗಿ ಬಲಗೊಳ್ಳುತ್ತಿದ್ದು, ಮಾನವೀಯ ಮೌಲ್ಯಗಳಲ್ಲಿ ಕುಸಿಯುತ್ತಿದೆ. ಮೌಲ್ಯಗಳಿಗೆ ಗೌರವ ನೀಡುವ ಸಂಪ್ರದಾಯ ರೂಢಿಸದ ಹೊರತು ದೇಶದ ಸಮಗ್ರ ಪ್ರಗತಿ ಸಾಧ್ಯವಿಲ್ಲ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌. ನಾಗಮೋಹನದಾಸ ಅಭಿಪ್ರಾಯಪಟ್ಟರು.

ಸೂರ್ಯೋದಯ ವಾಕಿಂಗ್‌ ಕ್ಲಬ್‌ನ ಆರನೇ ವಾರ್ಷಿಕೋತ್ಸವ ನಿಮಿತ್ತ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಕ್ರಿಕೆಟ್ ಪಂದ್ಯಾವಳಿ ವಿಜೇತ ತಂಡಗಳಿಗೆ ಟ್ರೋಫಿ ವಿತರಣೆ ಹಾಗೂ ಉಚಿತ ಕೋಚಿಂಗ್‌ ನೀಡಿದ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವ ಸಮಾಜದಲ್ಲಿ ಹಿರಿಯರಿಗೆ ಗೌರವ ಸಿಗುವುದಿಲ್ಲವೋ ಅದು ನಾಗರಿಕ ಸಮಾಜ ಅನಿಸಿಕೊಳ್ಳುವುದಿಲ್ಲ. ಪ್ರತಿಭೆಗಳಿಗೆ ಮನ್ನಣೆ ಸಿಗದಿದ್ದಲ್ಲಿ ಆರ್ಥಿಕ ಪ್ರಗತಿ ಇರುವುದಿಲ್ಲ. ಆದರೆ, ಈ ಸೂರ್ಯೋದಯ ಸಂಸ್ಥೆಯು ಹಿರಿಯರನ್ನು ಗೌರವಿಸುವಂಥ, ಪ್ರತಿಭೆಯನ್ನು ಗುರುತಿಸುವಂಥ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ 70 ವರ್ಷಗಳಿಂದಲೂ ದೇಶದ ಜನಪ್ರತಿನಿಧಿಗಳು ಸಂವಿಧಾನದ ಮಹತ್ವದ ಬಗ್ಗೆಯೂ ಜನರಿಗೆ ತಿಳಿಸಿಲ್ಲ. ಜನರೂ ತಿಳಿದುಕೊಳ್ಳಲು ಹೋಗಿಲ್ಲ. ಇಂದು ಪಠ್ಯಪುಸ್ತಕಗಳಲ್ಲಿ ಸಂವಿಧಾನ ವಿಷಯವನ್ನು ಅಳವಡಿಸಿದರೂ ಯಾರೂ ಅದನ್ನು ಅರ್ಥೈಸಿಕೊಂಡು ನಡೆಯುತ್ತಿಲ್ಲ ಎಂದರು....

ಫೋಟೋ - http://v.duta.us/V9AZKAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Iso-kgAA

📲 Get Raichur News on Whatsapp 💬