ಮೂಲಸೌಕರ್ಯ ಕಲ್ಪಿಸಲು ಆಗ್ರಹ

  |   Belgaumnews

ಬೈಲಹೊಂಗಲ: ಪಟ್ಟಣದ ಕೆರೆಯ ದಂಡೆಯ ನಿವಾಸಿಗಳು ಮಳೆ ನೀರಿನಿಂದಾಗುವ ಹಾನಿ ತಪ್ಪಿಸಬೇಕು. ಸ್ವಚ್ಛತೆ ಕಾಪಾಡಬೇಕು. ಶಾಶ್ವತ ನೆಲೆ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ರವಿವಾರ ಪ್ರತಿಭಟನೆ ನಡೆಸಿದರು.

ತಮ್ಮಗಾಗುತ್ತಿರುವ ಅನ್ಯಾಯಕ್ಕೆ ಕೂಡಲೇ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಬೇಕು ಇಲ್ಲದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಿ, ಕೀಲಿ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ ನಿವಾಸಿಗಳು, ತಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಪುರಸಭೆ ಸದಸ್ಯರ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಸ್ಥಳದಲ್ಲೆ ಕೆಲಕಾಲ ಮಕ್ಕಳು, ಮಹಿಳೆಯರು ಆಕ್ರೋಶ ವ್ಯಕ್ತ ಪಡಿಸಿದರು.

ಜಿಲ್ಲಾ ಬೀದಿ ವ್ಯಾಪಾರಿಗಳ ಅಧ್ಯಕ್ಷ ಸುನೀಲ ಹಲಗಿ ಮಾತನಾಡಿ, ಕೆರೆಯ ದಂಡೆಯ ಮೇಲೆ ಮುಸ್ಲಿಂ ಸಮಾಜದ ಸೈಯ್ಯದ, ಸಿಖ್‌ ಸಮುದಾಯದ ನಿವಾಸಿಗಳು ಯಾವುದೇ ಮೂಲ ಸೌಕರ್ಯಗಳಿಲ್ಲದೇ 40 ವರ್ಷಗಳಿಂದ ವಾಸಿಸುತ್ತಿದ್ದು, ಈ ಸ್ಥಳದ ಮೇಲ್ಭಾಗದಿಂದ ಮಳೆಗಾಲದಲ್ಲಿ ಮಳೆ ನೀರು ಕೆರೆಗೆ ಹರಿದು ಬರುತ್ತದೆ. ಆ ಸಂದರ್ಭದಲ್ಲಿ ಈ ನಿವಾಸಿಗಳ ಮನೆಗೆ ನೀರು ನುಗ್ಗುತ್ತದೆ. ಚಿಕ್ಕಮಕ್ಕಳು ಆಟವಾಡುತ್ತಾ ನೀರಿನಲ್ಲಿ ತೇಲಿ ಹೋದ ಘಟನೆಗಳು ಸಹ ನಡೆದಿವೆ. ಈ ಕುರಿತು ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಕೂಡಲೇ ನೀರು ಹರಿಯಲು ದೊಡ್ಡ ಗಟಾರು ನಿರ್ಮಿಸಬೇಕು ಸ್ಪಂದಿಸದಿದ್ದರೆ ಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು....

ಫೋಟೋ - http://v.duta.us/3pH4WAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/7Et-MAAA

📲 Get Belgaum News on Whatsapp 💬