ಮಹಾತ್ಮರ ಸಂದೇಶಗಳು ಸಾರ್ವಕಾಲಿಕ

  |   Bijapur-Karnatakanews

ಇಂಡಿ: ಬುದ್ಧ, ಬಸವ, ಅಂಬೇಡ್ಕರ್‌ ಅವರು ಶೋಷಿತರ ಉದ್ದಾರಕರಾಗಿದ್ದು ಅವರ ಸಂದೇಶಗಳು ಸರ್ವಕಾಲಿಕ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಬಾಬಾಸಾಹೇಬ ಅಂಬೇಡ್ಕರ್‌ ಹಾಗೂ ಭಗವಾನ ಬುದ್ಧ ಜಯಂತಿ ನಿಮಿತ್ತ ಭಾರತೀಯ ಬೌದ್ಧಸಭಾ ಮತ್ತು ಡಿಪ್ರೇಸ್‌ ಕ್ಲಾಸ್‌ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘ ಪಟ್ಟಣದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು.

ಸಾಮೂಹಿಕ ಸರಳ ವಿವಾಹ ಅತ್ಯಂತ ಪವಿತ್ರ. ಬೌದ್ಧ ಧರ್ಮದ ಪ್ರಕಾರ ಯಾವುದೇ ವ್ಯಕ್ತಿ ಜೀವನದಲ್ಲಿ ಅಡಂಭರವಿಲ್ಲದ ಶುದ್ಧ ಜೀವನ ಸಾಗಿಸುವುದಾಗಿದೆ. ಭಗವಂತ ಈ ಭೂಮಿ ಮೇಲೆ ಪ್ರತಿಯೊಂದು ಜೀವಿಗೆ ತನ್ನದೇಯಾದ ವಿಶಿಷ್ಟ ಶಕ್ತಿ ಕೊಟ್ಟಿದ್ದಾನೆ. ಅದನ್ನು ಒಳ್ಳೆ ಕಾರ್ಯಗಳಿಗೆ ಉಪಯೋಗಿಸಬೇಕು. ಇಂದು ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಬೌದ್ಧ ಮಹಾಸಭಾ ಪದಾಧಿಕಾರಿ ಗೌರವ ತರುವ ಕೆಲಸ ಮಾಡಿದ್ದಾರೆ ಎಂದರು.

ಇಂತಹ ಕಾರ್ಯಗಳು ಇನ್ನೊಂದು ಸಮುದಾಯಕ್ಕೆ ಮಾದರಿಯಾಗಿದೆ. ಒಂದು ಸಮಾಜದ ಪ್ರಗತಿಗೆ ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ. ದಲಿತ ಸಮುದಾಯ ಬಂಧುಗಳು ಅಂಬೇಡ್ಕರ್‌ ಹೇಳಿದ ಮೂರು ಮಂತ್ರಗಳಾದ ಶಿಕ್ಷಣ, ಸಂಘಟನೆ, ಹೋರಾಟಗಳೆಂಬ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲಿ ಸಮಾನತೆ ಇದೆ ಅಲ್ಲಿ ಒಳ್ಳೆ ಕಾರ್ಯಗಳು ನಡೆಯುತ್ತವೆ. ಮನುಷ್ಯ ಇರುವ ದಿನಗಳಲ್ಲಿ ಪ್ರೀತಿ, ವಿಶ್ವಾಸದ ಜೀವನ ಸಾಗಿಸಬೇಕು. ಡಾ| ಬಾಬಾಸಾಹೇಬ ಅಂಬೇಡ್ಕರ್‌ ಕೇವಲ ಒಂದೇ ವರ್ಗಕ್ಕೆ ಸೀಮಿತರಲ್ಲ. ಇಡಿ ಶೋಷಿತ ಸಮುದಾಯದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಬಾಬಾಸಾಹೇಬ ಅಂಬೇಡ್ಕರ್‌ ವಿಚಾರಗಳು ಮನೆ ಮನೆಗೆ ತಲುಪುವಂತಾಗಬೇಕು ಎಂದು ಹೇಳಿದರು....

ಫೋಟೋ - http://v.duta.us/arAwmAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/pwPlZAAA

📲 Get Bijapur Karnataka News on Whatsapp 💬