ಮಹಾಲಿಂಗಪುರ ಯಾವ ತಾಲೂಕಿಗೆ ಬರುತ್ತೆ?

  |   Bagalkotnews

ಮಹಾಲಿಂಗಪುರ: ಹೊಲ ಮನೆ ಖರೀದಿ, ನ್ಯಾಯಾಲಯ ವ್ಯಾಜ್ಯಗಳಿಗೆ ಮುಧೋಳ ತಾಲೂಕು, ಮನವಿ ಸಲ್ಲಿಸಲು ಮಾತ್ರ ನೂತನ ರಬಕವಿ-ಬನಹಟ್ಟಿ ತಾಲೂಕು, ನೆಮ್ಮದಿ ಕೇಂದ್ರಕ್ಕೆ ಸಂಬಂಧಿಸಿದ ಕೆಲಸಗಳಿಗೆ ತೇರದಾಳ ತಾಲೂಕಿಗೆ ಹೋಗಬೇಕಿರುವುದರಿಂದ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಪ್ರತಿ ಕೆಲಸ ಕಾರ್ಯಗಳಿಗೆ ಇಂದು ಮೂರೂ ತಾಲೂಕಿಗೆ ಅಲೆದಾಡುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ ಸಂಗತಿ.

ಹಿಂದಿನ ಕಾಂಗ್ರೆಸ್‌ ಸರಕಾರ ಪಟ್ಟಣವನ್ನು 2018 ಫೆಬ್ರುವರಿಗೂ ಮೊದಲು ಮೊದಲು ನೂತನ ರಬಕವಿ-ಬನಹಟ್ಟಿ ತಾಲೂಕಿಗೆ ಸೇರ್ಪಡೆ ಮಾಡಿತ್ತು. ಇದರಿಂದ ಪಟ್ಟಣದ ಜನತೆ ಮುಧೋಳಕ್ಕಿಂತ ನೂತನ ರಬಕವಿ-ಬನಹಟ್ಟಿ ತಾಲೂಕು 10 ಕಿ.ಮೀ. ಸಮೀಪವಾಯ್ತು ಎಂದುಕೊಂಡು ಖುಷಿಯಾಗ್ದಿರು.

ತೇರದಾಳ ಮತಕ್ಷೇತ್ರದ ಅಂದಿನ ಶಾಸಕಿ, ಸಚಿವೆ ಉಮಾಶ್ರೀ 9-2-2018ರಂದು ಅಧಿಕೃತವಾಗಿ ರಬಕವಿ-ಬನಹಟ್ಟಿ ತಾಲೂಕು ಪ್ರಾರಂಭೋತ್ಸವ ಸಮಾರಂಭ ನೆರವೇರಿಸಿದ್ದರು. ಆದರೆ ನೂತನ ತಾಲೂಕು ಘೋಷಣೆಯಾಗಿ ಒಂದು ವರ್ಷ ನಾಲ್ಕು ತಿಂಗಳು ಗತಿಸಿದರೂ ಇದುವರೆಗೆ ಯಾವುದೇ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಗೊಂಡಿಲ್ಲ. ಹೀಗಾಗಿ ಮಹಾಲಿಂಗಪುರ ಮತ್ತು ಈ ಭಾಗದ ಹತ್ತಾರು ಹಳ್ಳಿಗಳ ಜನರು ತಾಲೂಕು ಕೆಲಸ-ಕಾರ್ಯಗಳಿಗೆ ಇಂದಿಗೂ ಮುಧೋಳ ಪಟ್ಟಣವನ್ನೇ ಅವಲಂಬಿಸುವಂತಾಗಿದೆ. ರಬಕವಿ-ಬನಹಟ್ಟಿ ತಾಲೂಕು ಕೇವಲ ಉದ್ಘಾಟನೆಗೆ ಮಾತ್ರ ಸೀಮಿತ ಎಂಬಂತಾಗಿದೆ....

ಫೋಟೋ - http://v.duta.us/-Y6ZmQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/PvkmYAAA

📲 Get Bagalkot News on Whatsapp 💬