ಯೋಗ ತಾಲೀಮಿಗೆ ನೀರಸ ಪ್ರತಿಕ್ರಿಯೆ

  |   Mysorenews

ಮೈಸೂರು: ಮೈಸೂರಿನಲ್ಲಿ ಈ ಬಾರಿ ಯೋಗ ಪ್ರದರ್ಶಿಸುವ ಮೂಲಕ ಗಿನ್ನಿಸ್‌ ದಾಖಲೆ ಮಾಡಲು ಸಜ್ಜಾಗಿದ್ದರು. ಆದರೆ, ಗಿನ್ನಿಸ್‌ ದಾಖಲೆಗೆ ಅರ್ಜಿ ಸಲ್ಲಿಸದಿರಲು ಮೈಸೂರು ಜಿಲ್ಲಾಡಳಿತ ನಿರ್ಧರಿಸಿದ ಬೆನ್ನಲ್ಲೇ ಯೋಗ ತಾಲೀಮಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಳೆದ ನಾಲ್ಕು ವಾರಗಳಿಂದ ಮೈಸೂರಿನ ವಿವಿಧ ಉದ್ಯಾನವನಗಳಲ್ಲಿ ನಗರದ ಹಲವು ಸಂಘ ಸಂಸ್ಥೆಗಳು ಪ್ರತ್ಯೇಕವಾಗಿ ಯೋಗ ತಾಲೀಮು ನಡೆಸಿದ್ದವು. ಅಂದರಂತೆಯೇ ಭಾನುವಾರವೂ ಅರಮನೆ ಒಳ ಆವರಣದಲ್ಲಿ ಯೋಗ ಪಟುಗಳು ತಾಲೀಮಿನಲ್ಲಿ ಭಾಗವಹಿಸಿದ್ದರು.

2017ರಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಡೆದಿದ್ದ ಯೋಗ ಪ್ರದರ್ಶದಲ್ಲಿ ಒಟ್ಟು 55,506 ಮಂದಿ ಪಾಲ್ಗೊಂಡು ಗಿನ್ನಿಸ್‌ ಪುಸ್ತಕದಲ್ಲಿ ದಾಖಲೆ ನಿರ್ಮಿಸಿದ್ದರು. ಬಳಿಕ ರಾಜಸ್ಥಾನದ ಕೋಟಾದಲ್ಲಿ 2018ರಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 1,00,984 ಮಂದಿ ಭಾಗವಹಿಸಿ ಮೈಸೂರಿನ ಗಿನ್ನಿಸ್‌ ದಾಖಲೆಯನ್ನು ಅಳಿಸಲಾಗಿತ್ತು.

ಜಿಲ್ಲಾಡಳಿತ ನಿರ್ಧಾರ: ಈ ಹಿನ್ನೆಲೆಯಲ್ಲಿ ಈ ಬಾರಿ ಕೋಟಾ ದಾಖಲೆಯನ್ನು ಮುರಿಯಬೇಕೆಂದು ಮೈಸೂರಿನ ಸಂಘ ಸಂಸ್ಥೆಗಳು ಮತ್ತೆ ತಯಾರಿ ನಡೆಸಿದ್ದವು. ಆದರೆ, ಮೈಸೂರು ಜಿಲ್ಲಾಡಳಿತ ಈ ಬಾರಿ ಗಿನ್ನಿಸ್‌ ದಾಖಲೆಗೆ ಹೋಗದಿರಲು ನಿರ್ಧಸಿರುವುದಾಗಿ ಪ್ರಕಟಿಸಿತು. ಈ ಹೇಳಿಕೆ ಬೆನ್ನಲ್ಲೇ ಯೋಗ ಪಟುಗಳು ನಿರಾಸೆಗೊಂಡಿದ್ದಾರೆ....

ಫೋಟೋ - http://v.duta.us/iEtvHAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/rKz42gAA

📲 Get Mysore News on Whatsapp 💬