ರಾಯರ ಮಠದಿಂದ ಭಕ್ತಿ ಕ್ರಾಂತಿ: ಸುಬುಧೇಂದ್ರ ಶ್ರೀ

  |   Kalburaginews

ಸೇಡಂ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠ ಈ ಭಾಗದಲ್ಲಿ ಭಕ್ತಿಯ ಕ್ರಾಂತಿ ಮಾಡಲಿದೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಪೂಜ್ಯ ಸುಬುಧೇಂದ್ರ ತೀರ್ಥರು ನುಡಿದರು.

ಪಟ್ಟಣದ ಕೋಡ್ಲಾ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರಾಘವೇಂದ್ರ ಸ್ವಾಮಿ ಮಠದ ಕಟ್ಟಡ ಕಾಮಗಾರಿ ವೀಕ್ಷಿಸಿದ ಅವರು, ಭಕ್ತರಿಗೆ ಆಶೀರ್ವಚನ ನೀಡಿದರು.

ರಾಘವೇಂದ್ರ ಸ್ವಾಮಿ ಸೇಡಂ ಜನತೆ ಮೇಲೆ ಪ್ರೀತಿ ಇಟ್ಟಿದ್ದಾರೆ. ಅದರ ಪರಿಣಾಮವಾಗಿಯೇ ಇಲ್ಲಿ ಮಠ ನಿರ್ಮಾಣವಾಗುತ್ತಿದೆ. ರಾಘವೇಂದ್ರ ಸ್ವಾಮಿಗಳ ಮಠ ಭಕ್ತರ ಶ್ರದ್ಧಾ ಕೇಂದ್ರವಾಗಬೇಕು. ಕೆಳ ಮಹಡಿ ಪೂರ್ಣಗೊಂಡ ಕೂಡಲೇ ಭಕ್ತಿ, ಧರ್ಮ ಕಾರ್ಯಗಳು ನಡೆಯಲಿ. ಎಲ್ಲ ಸಮಾಜದಲ್ಲಿ ರಾಘವೇಂದ್ರ ಸ್ವಾಮಿಗಳ ಭಕ್ತರಿದ್ದಾರೆ. ಕಲಬುರಗಿಯಲ್ಲೇ ಮಾದರಿ ಮಠ ಇದಾಗಲಿದೆ ಎಂದರು.

ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ರಾಘವೇಂದ್ರ ಸ್ವಾಮಿಗಳ ಮಠ ನಿರ್ಮಾಣ ಈ ಭಾಗದ ಜನತೆಗೆ ಅತ್ಯಂತ ಸಂತೋಷದ ವಿಷಯವಾಗಿದೆ. ಸಮಾಜದ ಮುಖಂಡರೊಂದಿಗೆ ಚರ್ಚೆ ಮಾಡಲಾಗಿದೆ. ಶಾಸಕರ ಅನುದಾನದಲ್ಲಿ ಮಠದ ಕಾಮಗಾರಿಗೆ 10 ಲಕ್ಷ ರೂ. ನೀಡಲಾಗುವುದು. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ನಾಲೈ್ಕದು ದಿನದಲ್ಲಿ ಅನುಮೋದನೆ ದೊರೆಯಲಿದೆ ಎಂದು ಭರವಸೆ ನೀಡಿದರು....

ಫೋಟೋ - http://v.duta.us/xrFJTAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/4In1yQAA

📲 Get Kalburagi News on Whatsapp 💬