ರಸ್ತೆ ಬದಿ ವ್ಯಾಪಾರಿಗಳಿಗೆ ದುಬಾರಿ ಸುಂಕ ಬರೆ

  |   Mysorenews

ಎಚ್‌.ಡಿ.ಕೋಟೆ: ರಸ್ತೆ ಬದಿ ವ್ಯಾಪಾರಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸದೇ ಯಾವುದೇ ಸ್ಥಳೀಯ ಸಂಸ್ಥೆಗಳು ಸುಂಕ ವಸೂಲಿ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದ್ದರೂ, ಇಲ್ಲಿನ ಪುರಸಭೆ ಅಧಿಕಾರಿಗಳು ಮಾತ್ರ ತಮಗಿಷ್ಟ ಬಂದಂತೆ ಸುಂಕ ವಸೂಲಿ ಮಾಡುತ್ತಿದ್ದಾರೆ ಎಂದು ವ್ಯಾಪಾರಿಗಳು ದೂರಿದ್ದಾರೆ.

ಪುರಸಭೆ ಹ್ಯಾಂಡ್‌ ಪೋಸ್ಟ್‌ನಲ್ಲಿ ಹತ್ತಾರು ವರ್ಷಗಳಿಂದ 50ಕ್ಕೂ ಹೆಚ್ಚು ಫ‌ುಟ್‌ಪಾತ್‌ ವ್ಯಾಪಾರಿಗಳು ರಸ್ತೆ ಬೀದಿಯಲ್ಲಿ ಹೋಟೆಲ್‌, ತರಕಾರಿ, ಗೋಬಿ, ಪಾನಿಪುರಿ, ಬಳೆ, ಹಣ್ಣು ಹಂಪಲು, ಟೀ ಅಂಗಡಿಗಳನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ.

ಎಷ್ಟು ಸುಂಕ?: ವರ್ಷ ಕಳೆದರೂ ಇಲ್ಲಿನ ಪುರಸಭೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಾರದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಪುರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿಯನ್ನು ಬಿಟ್ಟು ಮನಬಂದಂತೆ ಸುಂಕ ವಸೂಲಿ ಮಾಡುತ್ತಿದ್ದಾರೆ. ಒಂದು ಫಾಸ್ಟ್‌ಪುಡ್‌ ಹೋಟೆಲ್‌ಗೆ ದಿನಕ್ಕೆ 50 ರಿಂದ 100 ರೂ., ಪಾನಿಪುರಿ, ಗೋಬಿ, ಟೀ ಅಂಗಡಿಗಳಿಗೆ 30 ರಿಂದ 50 ರೂ.ವರೆಗೆ ಸುಂಕ ವಸೂಲಿ ಮಾಡುತ್ತಿದ್ದಾರೆ. ನಗರಸಭೆ ಹಾಗೂ ನಗರ ಪಾಲಿಕೆ ವ್ಯಾಪ್ತಿಯಲ್ಲೂ ಇಷ್ಟೊಂದು ದುಬಾರಿ ಸುಂಕ ವಸೂಲಿ ಇಲ್ಲ ಎಂದು ಹೇಳಲಾಗುತ್ತಿದೆ....

ಫೋಟೋ - http://v.duta.us/nkpaDgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/4-dEigAA

📲 Get Mysore News on Whatsapp 💬