ವಾಲ್ಮೀಕಿ ಶ್ರೀ ಪಾದಯಾತ್ರೆಗೆ ಭವ್ಯ ಸ್ವಾಗತ

  |   Davanagerenews

ದಾವಣಗೆರೆ: ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ನೀಡುವಂತೆ ಒತ್ತಾಯಿಸಿ ರಾಜನಹಳ್ಳಿಯಿಂದ ರಾಜಧಾನಿವರೆಗೆ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯು ಭಾನುವಾರ ಹರಿಹರ ಮೂಲಕ ದಾವಣಗೆರೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಭವ್ಯವಾಗಿ ಸ್ವಾಗತಿಸಲಾಯಿತು.

ನಂತರ ಪಾದಯಾತ್ರೆಯು ಪಿ.ಬಿ. ರಸ್ತೆ, ರೇಣುಕಾ ಮಂದಿರ, ಎವಿಕೆ ರಸ್ತೆ ಮಾರ್ಗವಾಗಿ ನಾಯಕ ವಿದ್ಯಾರ್ಥಿ ನಿಲಯ ತಲುಪಿತು. ಈ ವೇಳೆ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರನ್ನು ನಾಯಕ ಸಮಾಜದ ಮುಖಂಡರು ಪಾದ ತೊಳೆದು, ಹಾರ ಹಾಕಿ, ಆಶೀರ್ವಾದ ಪಡೆದು ಸಂಭ್ರಮದಿಂದ ಬರಮಾಡಿಕೊಂಡರು.

ಈ ವೇಳೆ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ನಾಳೆ ನಾಯಕ ವಿದ್ಯಾರ್ಥಿ ನಿಲಯದಿಂದ ಪಾದಯಾತ್ರೆ ಮುಂದುವರಿಯಲಿದೆ. ಇಂದು ಪಾದಯಾತ್ರೆಗೆ ಬೇರೆ ಭಾಗಗಳಿಂದ ಬಂದಂತಹ ಎಲ್ಲಾ ಸಮಾಜದ ಬಾಂಧವರಿಗೆ ಸ‌ಮಾಜದ ವಸತಿ ನಿಲಯದಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಾಜದ ಎಲ್ಲರೂ ಕೂಡ ಇಂದಿನ ಪಾದಯಾತ್ರೆಯನ್ನು ಯಶಸ್ವಿಗೊಳಿಸಿದ್ದೀರಿ ಎಂದು ನುಡಿದರು....

ಫೋಟೋ - http://v.duta.us/SfG87AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/liKdgQAA

📲 Get Davanagere News on Whatsapp 💬