ಶಾಸಕರ‌ ಹೆಸರಿನಲ್ಲಿ ಮಗ ಶರಣಗೌಡ ದರ್ಬಾರ್‌: ದೂರು

  |   Yadgirinews

ಗುರುಮಠಕಲ್: ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರ ಹೆಸರಿನಲ್ಲಿ ಮಗ ಶರಣಗೌಡ ಕಂದಕೂರ ಅವರು ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಬ್ಲಾಕ್‌ ಅಧ್ಯಕ್ಷ ನರಸಿಂಹಲು ನಿರೇಟಿ ನೇತೖತ್ವದಲ್ಲಿ ಕಾರ್ಯಕರ್ತರು ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ದೂರು ನೀಡಿದರು.

ಬರ ಅಧ್ಯಯನದ ಬಳಿಕ ಗುರುಮಠಕಲ್ ಪಟ್ಟಣಕ್ಕೆ ಆಗಮಿಸಿದ್ದ ಯಡಿಯೂರಪ್ಪ ಅವರನ್ನು ಭೇಟಿಯಾದ ಕಾರ್ಯಕರ್ತರ ನಿಯೋಗ, ಮತಕ್ಷೇತ್ರದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಎಲ್ಲರನ್ನು ಶಾಸಕರ ಪುತ್ರ ನಿಯಂತ್ರಿಸುತ್ತಿದ್ದಾರೆ. ನಮ್ಮ ಕೆಲಸಗಳಾಗುತ್ತಿಲ್ಲ. ಶಾಸಕರ ಮಗ ದಿನ ಬೆಳಗಾದ್ರೆ ಅಧಿಕಾರಿಗಳನ್ನು ಕರೆಸಿಕೊಂಡು ಊರು ಊರು ತಿರುಗುತ್ತಿದ್ದಾರೆ ಎಂದು ಅಳಲುಕೊಂಡರು.

ಬಿಜೆಪಿ ಕಾರ್ಯಕರ್ತರ ಕೆಲಸ ಮಾಡದ್ದಂತೆ ಶರಣಗೌಡ ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರ ಕೆಲಸಗಳನ್ನು ಮಾಡಿಸುತ್ತಿದ್ದಾರೆ ಎಂದು ದೂರಿದರು. ಗ್ರಾಮ ವಾಸ್ತವ್ಯ ಗುರುಮಠಕಲ್ ಮತಕ್ಷೇತ್ರದ ಚಂಡರಕಿಗೆ ಜೂ. 21ರಂದು ಆಗಮಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾರ್ಯಕ್ರಮಕ್ಕಾಗಿ ಅಧಿಕಾರಿಗಳನ್ನು ತಾವೆ ಸ್ವತಃ ಕರೆದುಕೊಂಡು ತಿರುಗಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು....

ಫೋಟೋ - http://v.duta.us/LRBKSAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/_4Kn1gAA

📲 Get Yadgiri News on Whatsapp 💬