ಸಚಿವ ಸಂಪುಟ ವಿಸ್ತರಣೆ: ಹಾವೇರಿ ಶಾಸಕರ ಪೈಪೋಟಿ

  |   Karnatakanews

ಹಾವೇರಿ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಜೂ.12ಕ್ಕೆ ಸಂಪುಟ ವಿಸ್ತರಣೆಗೆ ಮಹೂರ್ತ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಶುರುವಾಗಿದೆ. ಜಿಲ್ಲೆಯ ಶಾಸಕರಾದ ಆರ್‌. ಶಂಕರ್‌ ಹಾಗೂ ಬಿ.ಸಿ. ಪಾಟೀಲ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳು. ಈ ಇಬ್ಬರಲ್ಲಿ ಯಾರಿಗೆ ಸಚಿವ ಸ್ಥಾನ ಎಂಬುದೇ ಕುತೂಹಲಕ್ಕೆ ಕಾರಣ.

ಸಂಪುಟ ವಿಸ್ತರಣೆಯಲ್ಲಿ ರಾಣಿಬೆನ್ನೂರು ಪಕ್ಷೇತರ ಶಾಸಕ ಆರ್‌. ಶಂಕರ್‌ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದು ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಇದು ನಿಜವಾದರೆ, ಆರ್‌. ಶಂಕರ್‌ ಮೈತ್ರಿ ಸರ್ಕಾರದಲ್ಲಿ ಎರಡನೇ ಬಾರಿ ಸಚಿವ ಸ್ಥಾನ ಪಡೆದಂತಾಗುತ್ತದೆ. ಕೆಪಿಜೆಪಿಯಿಂದ ಗೆದ್ದು ಮೈತ್ರಿ ಸರ್ಕಾರವನ್ನು ಬೆಂಬಲಿಸಿದ ಶಂಕರ್‌ಗೆ ಸರ್ಕಾರದ ಮೊದಲ ಸಂಪುಟದಲ್ಲಿಯೇ ಅರಣ್ಯ ಖಾತೆ ನೀಡಲಾಗಿತ್ತು.

ಆದರೆ, ಕೆಲವೇ ತಿಂಗಳಲ್ಲಿ ಕಾಂಗ್ರೆಸ್‌ ಅವರಿಂದ ಸಚಿವ ಸ್ಥಾನ ವಾಪಸ್‌ ಪಡೆದುಕೊಂಡಿತ್ತು. ಇದರಿಂದ ಬೇಸತ್ತ ಶಂಕರ್‌ ಲೋಕಸಭೆ ಚುನಾವಣೆಯಲ್ಲಿ ತಟಸ್ಥವಾಗಿದ್ದರೂ ಅವರ ಅಭಿಮಾನಿಗಳು ಬಹಿರಂಗವಾಗಿಯೇ ಬಿಜೆಪಿ ಬೆಂಬಲಿಸಿದ್ದರು. ಈಗ ಕಾಂಗ್ರೆಸ್‌ ಸಿ.ಎಸ್‌. ಶಿವಳ್ಳಿ ನಿಧನಾ ನಂತರ ಖಾಲಿ ಇದ್ದ ಸಚಿವ ಸ್ಥಾನವನ್ನು ಶಂಕರ್‌ಗೆ ನೀಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ....

ಫೋಟೋ - http://v.duta.us/FN5LXQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/kWpPRgAA

📲 Get Karnatakanews on Whatsapp 💬