ಸ್ಮಾರ್ಟ್‌ಸಿಟಿ ದಿಕ್ಕು-ದೆಸೆ ಪರಿಶೀಲನೆ

  |   Dharwadnews

ಹುಬ್ಬಳ್ಳಿ: ಅವಳಿ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನ ಕುರಿತಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅಧಿಕಾರಿಗಳ ಜತೆ ರವಿವಾರ ಚರ್ಚಿಸಿ, ಮಾಹಿತಿ ಪಡೆದರು.

ಸ್ಮಾರ್ಟ್‌ ಸಿಟಿ ಯೋಜನೆ ಮುಖ್ಯ ಎಂಜಿನಿಯರ್‌ ನಾರಾಯಣ ಇನ್ನಿತರ ಅಧಿಕಾರಿಗಳು ವಿವಿಧ ಯೋಜನೆಗಳ ಕುರಿತಾಗಿ ಮಾಹಿತಿ ನೀಡಿದರು. ಸ್ಮಾರ್ಟ್‌ ಸಿಟಿ ಯೋಜನೆಯಡಿ ಒಟ್ಟು 242.82 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ ಪ್ರಗತಿಯಲ್ಲಿವೆ. ಅಂದಾಜು 3.16 ಕೋಟಿ ರೂ. ವೆಚ್ಚದ ಆರು ಕಾಮಗಾರಿಗಳು ಪೂರ್ಣಗೊಂಡಿವೆ.

ಅಂದಾಜು 266.44 ಕೋಟಿ ರೂ. ವೆಚ್ಚದ ಕಾಮಗಾರಿಗಳು ಟೆಂಡರ್‌ ಹಂತದಲ್ಲಿದ್ದರೆ, 77 ಕೋಟಿ ವೆಚ್ಚದ 5 ಯೋಜನೆಗಳು ಡಿಪಿಆರ್‌ ಹಂತದಲ್ಲಿವೆ ಎಂದರು.

ಮಳೆ ನೀರು ಕೊಯ್ಲು ಯೋಜನೆಯನ್ನು ಪಾಲಿಕೆ ಆವರಣ, ಲ್ಯಾಮಿಂಗ್ಟನ್‌ ಶಾಲೆ, ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಅಂದಾಜು 34 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಅದೇ ರೀತಿ ಚಿಟಗುಪ್ಪಿ ಆಸ್ಪತ್ರೆ, ಪಾಲಿಕೆ ಹಾಗೂ ಲ್ಯಾಮಿಂಗ್ಟನ್‌ ಬಾಲಕಿಯರ ಪ್ರೌಢಶಾಲೆಯಲ್ಲಿ ಸ್ಯಾನಿಟರಿ ಪ್ಯಾಡ್‌ ವಿತರಣೆ ಹಾಗೂ ವಿಲೇವಾರಿ ಯಂತ್ರ ಅಳವಡಿಸಲಾಗಿದೆ. ಒಂದು ಅಂಗವಿಕಲರಿಗೆ ಸೇರಿದಂತೆ ಒಟ್ಟು 7 ಕಡೆ ಇ-ಶೌಚಾಲಯ ಅಳವಡಿಸಲಾಗಿದೆ ಎಂದು ವಿವರಿಸಿದರು....

ಫೋಟೋ - http://v.duta.us/uQ-VOgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/VTFYEwAA

📲 Get Dharwad News on Whatsapp 💬