ಸೋಲಾರ್‌ ಬೆಳಕು: ಅಮಾಸೆಬೈಲು ದೇಶಕ್ಕೆ ಮಾದರಿ

  |   Udupinews

ಸಿದ್ದಾಪುರ: ಅಮಾಸೆಬೈಲಿನಲ್ಲಿ ಬೆಳಕು ಮೂಡುವ ಮೂಲಕ ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್‌ ಯೋಜನೆಯ ಕಲ್ಪನೆ ಇಲ್ಲಿ ಸಾಕಾರವಾಗಿದೆ. ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಎ.ಜಿ. ಕೊಡ್ಗಿ ಅವರು ಪ್ರಕೃತಿಯನ್ನು ನಿಯಂತ್ರಣ ಮಾಡುವ ಸೂರ್ಯ ದೇವನ ಶಾಖವನ್ನು ಬಳಸಿಕೊಂಡು ಗ್ರಾಮಕ್ಕೆ ಸೋಲಾರ್‌ ಬೆಳಕು ನೀಡಿದ್ದಾರೆ. ಇದು ದೇಶಕ್ಕೇ ಮಾದರಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ಣಾಟಕ ಬ್ಯಾಂಕ್‌, ಅಮಾಸೆಬೈಲು ಗ್ರಾ.ಪಂ., ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಉಡುಪಿ ಜಿಲ್ಲಾಡಳಿತದ ಜಂಟಿ ಆಶ್ರಯದಲ್ಲಿ ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ಸೋಲಾರ್‌ ದೀಪಗಳ ಕೊಡುಗೆ ಸಮಾರೋಪ ಸಮಾರಂಭವನ್ನು ಜೂ. 9ರಂದು ಅಮಾಸೆಬೈಲು ಸರಕಾರಿ ಪ್ರೌಢ ಶಾಲೆಯ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಸೋಲಾರ್‌ ಯೋಜನೆಯಿಂದಾಗಿ ಗ್ರಾಮದ ಪ್ರತಿ ಮನೆಯಲ್ಲೂ ಬೆಳಕು ಮೂಡಿದೆ. ಬೆಳಕು ಅಭಿವೃದ್ಧಿಯ ಸಂಕೇತ. ಸೋಲಾರ್‌ ಮೂಲಕ ಅಮಾಸೆಬೈಲು ಆಭಿವೃದ್ಧಿ ಹೊಂದಿದೆ ಎಂದು ತಿಳಿಸಿದರು. ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಕೊಡ್ಗಿ ಅವರು ಸೂರ್ಯ ಶಕ್ತಿಯ ಮೂಲಕ ರಾತ್ರಿಯಲ್ಲೂ ಗ್ರಾಮ ಬೆಳಗುವಂತೆ ಮಾಡಿದ್ದಾರೆ. ಕೊಡ್ಗಿ ಅವರ ಸಮಾಜಿಕ ಸೇವೆ ಬಡವರ ಕಲ್ಯಾಣದ ಉದ್ದೇಶ ಹೊಂದಿದೆ ಎಂದರು....

ಫೋಟೋ - http://v.duta.us/w_HYgwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/hKvZOAAA

📲 Get Udupi News on Whatsapp 💬