ಸ್ವಚ್ಛ ಮಂಗಳೂರು ಅಭಿಯಾನ ದೇಶಕ್ಕೇ ಮಾದರಿ: ಸ್ವಾಮಿ ವೇದನಿಷ್ಠಾನಂದಜಿ

  |   Dakshina-Kannadanews

ಮಹಾನಗರ: ರಾಮಕೃಷ್ಣ ಮಿಷನ್‌ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 27ನೇ ವಾರದ ಶ್ರಮದಾನ ರವಿವಾರ ಜಪ್ಪಿನಮೊಗರು ಪ್ರದೇಶದಲ್ಲಿ ನಡೆಯಿತು.

ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯ ಲ್ಲಿರುವ ನೂತನವಾಗಿ ನಿರ್ಮಿಸಲಾದ ಬಸ್‌ ತಂಗುದಾಣದ ಮುಂಭಾಗದಲ್ಲಿ 27ನೇ ಶ್ರಮದಾನಕ್ಕೆ ರಾಮಕೃಷ್ಣ ಮಿಷನ್‌ನ ‘ವೇದಾಂತ ಕೇಸರಿ’ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಸ್ವಾಮಿ ಮಹಾಮೇಧಾನಂದಜಿ ಅವರು ಚಾಲನೆ ನೀಡಿದರು.

ಜಪ್ಪಿನಮೊಗರುವಿನಲ್ಲಿ ನೂತನವಾಗಿ ನಿರ್ಮಿ ಸಲಾದ ಬಸ್‌ ತಂಗುದಾಣವನ್ನು ರಾಮಕೃಷ್ಣ ಮಿಷನ್‌ನ ರಾಜಕೋಟ್‌ನ ಸ್ವಾಮಿ ವೇದ ನಿಷ್ಠಾನಂದಜಿ ಅವರು ಲೋಕಾರ್ಪಣೆ ಮಾಡಿದರು.

ಮಾಜಿ ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಸುರೇಂದ್ರ ಜೆ., ಉಮಾಪ್ರಸಾದ್‌ ಕಡೇಕಾರ್‌, ರಾಜೇಶ್‌ ಕರ್ಕೇರ, ರಾಕೇಶ್‌ ಆ್ಯಂಟನಿ, ಹರೀಶ್‌ ಗೌರಿಶಂಕರ್‌, ಚಿಂತನ್‌ ಡಿ.ವಿ. ಮತ್ತಿತರರು ಉಪಸ್ಥಿತರಿದ್ದರು.

ಸ್ವಾಮಿ ವೇದನಿಷ್ಠಾನಂದಜಿ ಮಾತನಾಡಿ, ಸ್ವಾಮಿ ವಿವೇಕಾನಂದರ ಆಶಯದಂತೆ ಈ ರಾಷ್ಟ್ರವನ್ನು ಕಟ್ಟುವವರು ಯುವ ಜನತೆ. ಆ ನಿಟ್ಟಿನಲ್ಲಿ ಈ ಅಭಿಯಾನದಲ್ಲಿ ಅನೇಕ ಯುವ ಜನಾಂಗ ಭಾಗವಹಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ದೇಶಾದ್ಯಂತ ಇರುವ ರಾಮಕೃಷ್ಣ ಮಿಷನ್‌ನ ಇತರ ಕೆಂದ್ರಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ ಎಂದರು....

ಫೋಟೋ - http://v.duta.us/Ah_fPgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Fih9lQAA

📲 Get Dakshina Kannada News on Whatsapp 💬